ಬಂಟ್ವಾಳ ಲಯನ್ಸ್, ಲಯನೆಸ್ ಕ್ಲಬ್ ಪದಗ್ರಹಣ


ಬಂಟ್ವಾಳದ ಲಯನ್ಸ್ ಮತ್ತು ಲಯೆಸ್ ಕ್ಲಬ್‌ನ 2018 ಮತ್ತು 19ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ನೂತನ ಅಧ್ಯಕ್ಷರಾಗಿ ಉದ್ಯಮಿ ಸುಧಾಕರ ಆಚಾರ್ಯ ನಿರ್ಗಮನ ಅಧ್ಯಕ್ಷ ಜಗದೀಶ ಎಡಪಡಿತ್ತಾಯ ಅವರಿಂದ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಲಯನ್ಸ್ ಜಿಲ್ಲಾ ಉಪಗವರ್ನರ್ ರೊನಾಲ್ಡ್ ಐಸಕ್ ಗೋಮ್ಸ್ ಪದಗ್ರಹಣ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಬಂಟ್ವಾಳ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿಯೇ ಅತ್ಯುತ್ತಮ ಕ್ಲಬ್ ಆಗಿ ಹೊರ ಹೊಮ್ಮಿದೆ. ವಿಶಿಷ್ಟ ಕಾರ್ಯಕ್ರಮಗಳನ್ನು ಈ ಕ್ಲಬ್ ಮಾಡುತ್ತಿದ್ದು ಕಳೆದ ವರ್ಷ ಹಲವಾರು ಸೇವಾ ಕಾರ್ಯಕ್ರಮಗಳನ್ನ ನಡೆಸಿ ಗುರುತಿಸಿಕೊಂಡಿದೆ ಎಂದರು.

ಜಾಹೀರಾತು

ಮುಖ್ಯ ಅತಿಥಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಾತನಾಡಿ ಜನರ ಸೇವೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಲಯನ್ಸ್ ಕ್ಲಬ್ ಸಹಕಾರಿಯಾಗಿದೆ. ತಾನು ಲಯನ್ಸ್ ಸದಸ್ಯನಾಗಿದ್ದು ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಈ ಸಂಸ್ಥೆ ಸಹಾಯ ಮಾಡಿದೆ ಎಂದರು. ಬಂಟ್ವಾಳದ ಶಾಸಕನಾಗಿ ಇಲ್ಲಿನ ಸಮಗ್ರ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ ಎಂದ ಅವರು ಅಧಿಕಾರವಹಿಸಿಕೊಂಡ ಹೊಸ ತಂಡಕ್ಕೆ ಸಾಕಷ್ಟು ಅವಕಾಶ ಹಾಗೂ ಸವಾಲುಗಳಿದ್ದು ಜವಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದಾಗ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ಶುಭ ಹಾರೈಸಿದರು.

ಇದೇ ಸಂದರ್ಭ ನಂದಾವರ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಚಂದು ನಾಕ್ ನಗ್ರಿ, ಗೀತಾ ವಸಂತ ರೈ ಹಾಗೂ ಶಾಸಕರನ್ನು ಸನ್ಮಾನಿಸಲಾಯಿತು. ಸೇವಾ ಕಾರ್ಯದಂಗವಾಗಿ ಮೂರು ಮಂದಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ಎಸ್‌ಎಸ್‌ಎಲ್‌ಸಿ ಹಾಘೂ ಪಿಯೂಸಿಯಲ್ಲಿ ಅತ್ಯಧಿಕ ಅಂಕ ಪಡೆದ ತಾಲೂಕಿನ ವಿದ್ಯಾರ್ಥಗಳನ್ನು ಅಭಿನಂದಿಸಲಾಯಿತು. ಕ್ಲಬ್‌ನ ದತ್ತಿ ನಿಧಿಗೆ ಸದಸ್ಯರು ದೇಣಿಗೆ ನೀಡಿದರು.

ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಣ್ ಅಗ್ರಬೈಲು ಕಾರ್ಯದರ್ಶಿ ರಾಮಕೃಷ್ಣ ರಾವ್, ಲೋಕೇಶ್ ಬಲ್ಲಾಳ್, ಅನಿತಾ ಗೋಮ್ಸ್, ಲಯನೆಸ್ ಅಧ್ಯಕ್ಷೆ ಚಿತ್ರಾ ಎಡಪಡಿತ್ತಾಯ, ನೂತನ ಅಧ್ಯಕ್ಷೆ ಶರ್ಮಿಳಾ ಸುಧಾಕರ ಆಚಾರ್ಯ, ಪದಾಧಿಕಾರಿಗಳಾದ ರೋಹಿತಾಶ್ವ, ಸುಜಾತ ರವಿಶಂಕರ್ ವಸಂತಿ ಎಲ್ ಶೆಟ್ಟಿ ರಾಮಯ್ಯ ಶೆಟ್ಟಿ , ಸಂದೀಪ್ ಕುಮಾರ್, ಜಯಂತಿ ಮುಕುಂದ ಪ್ರಭು, ಡಾ.ದಿವ್ಯ ವಸಂತ ಶೆಟ್ಟಿ, ಮೊದಲಾದವರು ಹಾಜರಿದ್ದರು. ಶ್ರೀನಿವಾಸ್ ಹಾಗೂ ರಾಧಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ದಾಮೋದರ ಬಿ.ಎಂ., ಸುನೀಲ್ ಮತ್ತಿತರರು ಸಹಕರಿಸಿದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಂಟ್ವಾಳ ಲಯನ್ಸ್, ಲಯನೆಸ್ ಕ್ಲಬ್ ಪದಗ್ರಹಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*