ಮಂಗಳೂರಿನ ಖಾಸಗಿ ಕಾಲೇಜು ವಸ್ತ್ರಸಂಹಿತೆ ಹೇರಿರುವುದರ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸಿಎಫ್ಐ ತಾಲೂಕು ಸಮಿತಿ ಸದಸ್ಯ ಸಲ್ಮಾನ್ ಮಾತನಾಡಿ, ಶೈಕ್ಷಣಿಕ ಏಳಿಗೆಯನ್ನು ದಮನಿಸಲು ಇಂತಹ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ದೂರಿದರು. ಸಿಎಫ್ಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲ ಮಾತನಾಡಿ, ವಿವಾದವು ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು, ಯಾವುದೇ ಸಂಧಾನ ಮಾತುಕತೆಗೆ ಸಂಬಂಧಿಸಿದವರು ಒಪ್ಪುತ್ತಿಲ್ಲ. ಇದು ಸಂವಿಧಾನದ ಮೌಲ್ಯಗಳಿಗೆ ಮಾಡುವ ಅಪಚಾರವಾಗಿದೆ. ನಮ್ಮ ಹೋರಾಟವು ಯಾವುದೇ ಸಂಸ್ಥೆಯ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ ಎಂದರು. ಪತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ನಬೀಲ್, ಕಾರ್ಯದರ್ಶಿ ಫಹದ್, ಜಾಬಿರ್, ಝಿಯಾನ್, ರಶೀದ್ ಹಾಗೂವಿದ್ಯಾರ್ಥಿಗಳು ಹಾಜರಿದ್ದರು. ಅಹ್ರಾಝ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಕ್ಯಾಂಪಸ್ ಫ್ರಂಟ್ ಪ್ರತಿಭಟನೆ"