ಕೊನೆಗೂ ಬಿ.ಸಿ.ರೋಡಿನ ಫ್ಲೈಓವರ್ ಅಡಿಯಲ್ಲಿ ತರಕಾರಿ ಮಾರುತ್ತಿದ್ದವರನ್ನು ಬಂಟ್ವಾಳ ಪುರಸಭೆ ತೆರವುಗೊಳಿಸಿದೆ. ಈ ಕುರಿತು www.bantwalnews.com ಸಹಿತ ಹಲವು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡಿದ್ದವು.
ಫ್ಲೈ ಓವರ್ ಅಡಿಯಲ್ಲಿ ತರಕಾರಿ ಮಾರಾಟ ಮಾಡುವ ಸಂದರ್ಭ ಟ್ರಾಫಿಕ್ ಕಿರಿಕಿರಿಗೂ ಕಾರಣವಾಗುತ್ತಿತ್ತು. ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತಾರೂ ಮಾರಾಟ ನಡೆಯುತ್ತಿತ್ತು.
ಪ್ರತಿ ಭಾನುವಾರ ಸಂತೆಯಂತೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ವ್ಯಾಪಾರ ನಡೆಯುತ್ತಿದ್ದರೆ, ಉಳಿದ ದಿನಗಳಲ್ಲೂ ಮುಂದುವರಿಯುತ್ತಿತ್ತು. ಈ ವಿಚಾರ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿತು. ಈ ಸಂದರ್ಭ ಅನಧಿಕೃತ ತರಕಾರಿ ಅಂಗಡಿಗಳ ವಿರುದ್ದ ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯಾಧಿಕಾರಿ ನೀಡಿದ್ದರು.
Be the first to comment on "ಕೊನೆಗೂ ಫ್ಲೈಓವರ್ ಅಡಿ ತರಕಾರಿ ಮಾರಾಟಗಾರರ ತೆರವು"