ಮಾಣಿ ಪೆರಾಜೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಅಧೀನದಲ್ಲಿ ನಡೆಯುತ್ತಿರುವ ಶ್ರೀರಾಮ ಸಂಸ್ಕೃತ ವೇದಪಾಠಶಾಲೆಗೆ ಏಳು ವರ್ಷದ ಕೃಷ್ಣಯಜುರ್ವೇದ, ಬೌಧಾಯನೀಯ ವೆಂಕಟೇಶೀಯ ಪೂರ್ವ, ಮಧ್ಯಮ, ಅಪರ ಸಂಪುಟ ಪ್ರಯೋಗ ಸಹಿತ ಸಂಸ್ಕೃತ ಜ್ಯೋತಿಷ್ಯ ನೂತನ ತರಗತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಮಠದ ಕಾರ್ಯಾಲಯದಿಂದ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಹದಿನಾರು ವರ್ಷ ಮೀರದ ಉಪನೀತ ಹವ್ಯಕ ವಟುಗಳಿಗೆ ಇಲ್ಲಿ ಅವಕಾಶವಿದ್ದು, ಕೃಷ್ಣಯಜುರ್ವೇದ ಪ್ರಯೋಗ ಸಹಿತ ಸಂಸ್ಕೃತ, ಜ್ಯೋತಿಷ್ಯ ತರಗತಿಯೊಂದಿಗೆ ಯೋಗಾಭ್ಯಾಸ ನೀಡಲಾಗುವುದು. ಆಯ್ಕೆಗೊಂಡ ವಿದ್ಯಾರ್ಥಿಗೆ ಉಚಿತ ಊಟ, ವಸತಿ ವ್ಯವಸ್ಥೆ ಇದೆ. ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಪರೀಕ್ಷೆಗೆ ಕುಳಿತುಕೊಳ್ಳಲು ಹಾಗೂ ಸಂಸ್ಕೃತ ಪರೀಕ್ಷೆಗೆ ಹಾಜರಾಗುವ ವ್ಯವಸ್ಥೆ ಇಲ್ಲಿದೆ. ವೇದಪಾಠಶಾಲೆಗೆ ಅರ್ಜಿ ಸಲ್ಲಿಸಲು ಜೂನ್ 10, 2018 ಕೊನೇ ದಿನ. 15ರಂದು ಸಂದರ್ಶನವಿದ್ದು. 16ರಿಂದ ತರಗತಿ ಆರಂಭವಾಗುತ್ತದೆ. ಆಸಕ್ತರು ಆಡಳಿತ ಸಮಿತಿ, ಶ್ರೀರಾಮ ಸಂಸ್ಕೃತ ವೇದ ಪಾಠಶಾಲೆ, ಶ್ರೀರಾಮಚಂದ್ರಾಪುರ ಮಠ ಪೆರಾಜೆ, ಮಾಣಿ, ಬುಡೋಳಿ ಅಂಚೆ, ಬಂಟ್ವಾಳ ತಾಲೂಕು 574253, ದೂರವಾಣಿ 08255-274318 ಮತ್ತು 9449487052 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Be the first to comment on "ಮಾಣಿ ಶ್ರೀರಾಮ ಸಂಸ್ಕೃತ ವೇದಪಾಠಶಾಲೆಗೆ ಅರ್ಜಿ ಆಹ್ವಾನ"