ಮೇ. 12ಕ್ಕೆ ನಡೆದ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಆದರೆ ಮತ ಎಣಿಕೆಯತ್ತ ದೃಷ್ಟಿ ಹಾಯಿಸದರೆ, ಕರಾವಳಿ ಸಹಿತ ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸನಿಹವೇ ಜೆಡಿಎಸ್ ಬರುತ್ತಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಮುನ್ನಡೆ ಸಾಧಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಬಿಜೆಪಿ ಕೇವಲ 1 ಸ್ಥಾನಗಳನ್ನಷ್ಟೇ ಪಡೆದಿತ್ತು. ಕಾಂಗ್ರೆಸ್ 7, ಬಿಜೆಪಿ 1 ಸೀಟು ಗಳಿಸಿತ್ತು. ಆದರೆ ಈ ಬಾರಿ ಅದು ಉಲ್ಟಾ ಆಗಲಿದೆ ಎಂಬ ಸೂಚನೆಗಳು ಮತ ಎಣಿಕಾ ಕೇಂದ್ರದಿಂದ ಬರುತ್ತಿವೆ. ಬಿಜೆಪಿ 7, ಕಾಂಗ್ರೆಸ್ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಬಿಜೆಪಿ ಗೆಲ್ಲುತ್ತಾ, ಕಾಂಗ್ರೆಸ್ ಗೆಲ್ಲುತ್ತಾ ಎಂಬ ಕುತೂಹಲ ರಾಜ್ಯದ ಚುನಾವಣಾ ಫಲಿತಾಂಶದತ್ತ ನೆಟ್ಟಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಗೆಲುವಿನ ಹಾದಿಯಲ್ಲಿದೆ.
ಸದ್ಯಕ್ಕೆ ಗೆಲುವು/ ಮುನ್ನಡೆಯಲ್ಲಿರುವವರು
ಮೂಡುಬಿದಿರೆ – ಉಮಾನಾಥ ಕೋಟ್ಯಾನ್
ಬಂಟ್ವಾಳ – ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು
ಬೆಳ್ತಂಗಡಿ – ಹರೀಶ್ ಪೂಂಜ
ಪುತ್ತೂರು – ಸಂಜೀವ ಮಠಂದೂರು
ಸುಳ್ಯ – ಎಸ್. ಅಂಗಾರ
ಮಂಗಳೂರು ದಕ್ಷಿಣ – ವೇದವ್ಯಾಸ ಕಾಮತ್
ಮಂಗಳೂರು ಉತ್ತರ – ಡಾ. ವೈ. ಭರತ್ ಶೆಟ್ಟಿ
(ಎಲ್ಲರೂ ಬಿಜೆಪಿ)
ಮಂಗಳೂರು – ಯು.ಟಿ.ಖಾದರ್
updated on 10.35
Be the first to comment on "ಕರಾವಳಿ ಸಹಿತ ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ"