ದೇವರ ಸೇವೆಯನ್ನು ನಿರಂತರವಾಗಿ ಕೈಗೊಂಡರೆ ಯಶಸ್ಸು ಖಚಿತ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮೀಜಿ ಹೇಳಿದರು.
ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನಃ ಪ್ರತಿಷ್ಠಾಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಬಯಲಾಟದ ಪ್ರಾಯೋಜಕ ಶ್ರೀ ಎಡನೀರು ಮಠದ ಜಯರಾಮ ಮಂಜತ್ತಾಯ ಹಾಗೂ ಶ್ರೀ ಕ್ಷೇತ್ರದ ಜೀರ್ಣೊದ್ಧಾರದ ವೇಳೆ ನಡೆದ ಶ್ರಮದಾನ ಸಮಯಲ್ಲಿ ಉಟೋಪಚಾರದಲ್ಲಿ ಸಹಕರಿಸಿದ ಯಮುನಾ ಇವರನ್ನು ಗೌರವಿಸಲಾಯಿತು.
ಮಂಕುಡೆ ರಾಮಕೃಷ್ಣ ಆಚಾರ್ ಮಂಗಳೂರು, ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ ಮರಡಿತ್ತಾಯ, ಶ್ರೀ.ಕ್ಷೆ.ಧ.ಗ್ರಾ.ಯೋಜನೆಯ ಸಾಲೆತ್ತೂರು ವಲಯ ಮೇಲ್ವಿಚಾರಕಿ ಮಮತಾ, ನ್ಯಾಯವಾದಿ ಪತ್ತುಮುಡಿ ಚಿದಾನಂದ ರಾವ್ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಸ್ತಾವನೆ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಲಾಲು ವಂದಿಸಿದರು. ವಿಜಯಾ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.
ಹೊರೆ ಕಾಣಿಕೆ ಮೆರವಣಿಗೆ
ಮಂಚಿ ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನ: ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ ಮೆರವಣಿಗೆ ಮೆಲ್ಕಾರ್ ಬಿರ್ವ ಸೆಂಟರ್ ವಠಾರದಿಂದ ನಡೆಯಿತು.
ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಸುನಿತಾ ನಾಯಕ್ ತೆಂಗಿನ ಕಾಯಿ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಕ್ಕಾಜೆ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ವಠಾರದಿಂದ ಪೂರ್ಣಕುಂಭ ಸ್ವಾಗತ, ಕಲ್ಲಡ್ಕ ಶಿಲ್ಪಗೊಂಬೆ ಬಳಗ, ಚೆಂಡೆ, ಯಕ್ಷಗಾನ ವೇಷ, ಭಜನಾ ತಂಡಗಳೊಂದಿಗೆ ಮೆರವಣಿಗೆಯು ಶ್ರೀ ಕ್ಷೇತ್ರ ಮಂಚಿಗೆ ಕಾಲ್ನಡಿಗೆಯಲ್ಲಿ ಆಗಮಿಸಿತು.
ಶ್ರೀ ಗೋಪಾಲಕೃಷ್ಣ ದೇವರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಮೆಲ್ಕಾರ್ ಬಿರ್ವ ಸೆಂಟರ್ ವಠಾರದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ಮತ್ತು ಪೂಜ್ಯ ಎಡನೀರು ಶ್ರೀಗಳನ್ನು ತೆರೆದ ವಾಹನದಲ್ಲಿ ಮೆರವಣಿಯ ಮೂಲಕ ಕರೆತರಲಾಯಿತು.
Be the first to comment on "ಮಂಚಿ ದೇವಳಕ್ಕೆ ಹೊರೆಕಾಣಿಕೆ, ಧಾರ್ಮಿಕ ಸಭೆ"