ಭಂಡಾರಿಬೆಟ್ಟು ಯುವ ಜನ ವ್ಯಾಯಾಮ ಶಾಲೆಯಲ್ಲಿ ನಡೆದ ಜೇಸೀ ಐ ಜೋಡುಮಾರ್ಗ ನೇತ್ರಾವತಿ ಯ ಜೇಸಿರೆಟ್ ವಿಭಾಗದ ಕಿರಣ್ ತರಬೇತಿ ಸಪ್ತಾಹ – 2018 ಕಾರ್ಯಕ್ರಮದಲ್ಲಿ ನಿಷ್ಪಕ್ಷಪಾತ ಮತದಾನಕ್ಕೆ ನಿಮ್ಮೊಂದಿಗೆ ನಮ್ಮ ಮನವಿ ಎಂಬ ಕರಪತ್ರ ಬಿಡುಗಡೆ ಮಾಡಲಾಯಿತು.
ಜೇಸಿ ಪೂರ್ವ ವಲಯಾಧಿಕಾರಿ ಹಾಗೂ ಜೇಸೀ ವಲಯ ತರಬೇತುದಾರರಾದ ಉಮೇಶ್ ನಿರ್ಮಲ್ ಕರಪತ್ರ ಬಿಡುಗಡೆ ಮಾಡಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಕರಪತ್ರ ಹಂಚುವ ಕೆಲಸ ಜೇಸೀ ಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಮತದಾನ ಮಾಡದೇ ಅವ್ಯವಸ್ಥೆಗಳನ್ನು ದೂರುವ ಅಧಿಕಾರ ಇರುವುದಿಲ್ಲ. ಮತದಾನ ಚಲಾಯಿಸದಿರುವ ಆಯ್ಕೆ ಬಂಡಾಯವಲ್ಲ ಅದು ಶರಣಾಗತಿ. ಯಾವುದೇ ಆಮಿಷಗಳಿಗೆ ಮತ ಮಾರಿಕೊಳ್ಳಬೇಡಿ . ನಿರ್ಬೀತಿಯಿಂದ ಮತ ಚಲಾಯಿಸಲು ಕರೆ ನೀಡಲಾಯಿತು. ಬಳಿಕ ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡಲಾಯಿತು. ಜೇಸಿ ಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾದ ಸವಿತಾ ನಿರ್ಮಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೇಸೀಐ ಜೋಡುಮಾರ್ಗ ನೇತ್ರಾವತಿ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಯೋಗ ಗುರು ತನಿಯಪ್ಪ, ಜೇಸೀ ಕಾರ್ಯದರ್ಶಿ ಹರ್ಷರಾಜ್, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಜೇಸಿರೆಟ್ ವಿಭಾಗದ ಸಂಯೋಜಕಿ ಅಮಿತಾ ಹರ್ಷರಾಜ್, ಜೇಸಿರೆಟ್ ವಿಭಾಗದ ಕಾರ್ಯದರ್ಶಿ ಮನಿಷಾ ಜಯರಾಜ್ ಉಪಸ್ತಿತರಿದ್ದರು.
Be the first to comment on "ಮತದಾರರ ಜಾಗೃತಿ ಅಭಿಯಾನ"