ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಪ್ಲಾಂಟ್ ನಲ್ಲಿ ಯಾವುದೇ ಪರವಾನಗಿ ಇಲ್ಲದೆ 33 ಲಕ್ಷ ರೂ ಮೌಲ್ಯದ 1,100 ಲೋಡ್ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಪ್ರಕರಣವನ್ನು ಪತ್ತೆ ಹಚ್ಚಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣೆ ಪಿಎಸ್ ಐ ಚಂದ್ರಶೇಖರ ಎಚ್.ವಿ, ಪ್ರೊಬೆಷನರಿ ಎಎಸ್ಪಿ ಅಕ್ಷಯ್, ಗ್ರಾಮಾಂತರ ಠಾಣೆ ಪಿಎಸ್ಸೈ ಪ್ರಸನ್ನ, ಬಂಟ್ವಾಳ ನಗರ ಅಪರಾಧ ವಿಭಾಗದ ಪಿಎಸ್ಸೈ ಹರೀಶ್ ಮತ್ತು ಬಂಟ್ವಾಳ ಪೊಲೀಸರ ತಂಡ ಪರಿಶೀಲಿಸಿದಾಗ ಯಾವುದೇ ಪರವಾನಗಿ ಇಲ್ಲದೆ ಇರುವುದು ಹಾಗೂ 1100 ಲೋಡ್ ಮರಳು ಅಕ್ರಮವಾಗಿ ದಾಸ್ತಾನು ಇರಿಸಿದ್ದು ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪಂಚನಾಮೆ ಮೂಲಕ ಮರಳನ್ನು ಸ್ವಾಧಿನಪಡಿಸಿಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Be the first to comment on "ಪರವಾನಗಿರಹಿತ 33 ಲಕ್ಷ ರೂ ಮೌಲ್ಯದ ಮರಳು ವಶ"