ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಮಂಗಳವಾರ ಬಂಟ್ವಾಳ ಕ್ಷೇತ್ರದಲ್ಲಿ 5 ನಾಮಪತ್ರಗಳು ಒಂದೇ ದಿನ ಸಲ್ಲಿಕೆಯಾಗಿದ್ದು, ಒಟ್ಟು 13 ನಾಮಪತ್ರಗಳು ಸ್ವೀಕಾರವಾಗಿವೆ.
ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ, ಎಂಇಪಿ ಅಭ್ಯರ್ಥಿ ಶಮೀರ್ ಹಾಗೂ ಬಿಜೆಪಿ ಡಮ್ಮಿ ಅಭ್ಯರ್ಥಿ ತುಂಗಪ್ಪ ಬಂಗೇರ ಅವರು ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದರೆ, ಉಳಿದಂತೆ ಬಿಜೆಪಿಯ ಯು.ರಾಜೇಶ್ ನಾಯ್ಕ್, ಎಸ್ ಡಿಪಿಐ ಅಭ್ಯರ್ಥಿಗಳಾದ ರಿಯಾಜ್, ಅಬ್ದುಲ್ ಮಜೀದ್ ತಲಾ ಎರಡು ಸೆಟ್ ಗಳಂತೆ ನಾಮಪತ್ರ ಸಲ್ಲಿಸಿದ್ದಾರೆ. ಇಬ್ರಾಹಿಂ ಕೈಲಾರ್ ಅವರು ಜೆಡಿಎಸ್ ಮತ್ತು ಪಕ್ಷೇತರನಾಗಿ ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಮೊದಲನೇ ದಿನ ಜೆಡಿಯುನಿಂದ ನಾಮಪತ್ರ ಸಲ್ಲಿಸಿದ್ದ ಬಾಲಕೃಷ್ಣ ಪೂಜಾರಿ ಕೊನೆಯ ದಿನ ಲೋಕಸೇವಾ ದಳದಿಂದ ನಾಮಪತ್ರ ಸಲ್ಲಿಸಿ ಗಮನ ಸೆಳೆದರು.
ಮಂಗಳವಾರ ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಸಿದವರು ಇವರು: ಶಮೀರ್ (ಎಂಇಪಿ), ರಾಜೇಶ್ ನಾಯ್ಕ್ (ಬಿಜೆಪಿ), ಅಬ್ದುಲ್ ಮಜೀದ್ ಖಾನ್ (ಎಸ್.ಡಿ.ಪಿ.ಐ), ಬಾಲಕೃಷ್ಣ ಪೂಜಾರಿ (ಲೋಕ ಆವಾಜ್ ದಳ), ತುಂಗಪ್ಪ ಬಂಗೇರ (ಬಿಜೆಪಿ).
ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ವಿಕಾಸ್ ಯಾದವ್ ಮಂಗಳವಾರ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಅವರೊಂದಿಗೆ ಮಾತುಕತೆ ನಡೆಸಿ, ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದರು.
Be the first to comment on "ಕೊನೇ ದಿನ 5, ಒಟ್ಟು 13 ನಾಮಪತ್ರ ಸಲ್ಲಿಕೆ"