ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರದ 287 ಪಿಆರ್ ಒ ಮತ್ತು 375 ಎಪಿಆರ್ ಓ ಗಳಿಗೆ ಮೊಡಂಕಾಪು ಇನ್ ಫೆಂಟ್ ಜೀಸಸ್ ಶಾಲೆಯಲ್ಲಿ ತರಬೇತಿಯನ್ನು ನೀಡಲಾಯಿತು.
ಈ ಸಂದರ್ಭ 21 ಸೆಕ್ಟರ್ ಅಧಿಕಾರಿಗಳು ಮತ್ತು ಐವರು ಮಾಸ್ಟರ್ ತರಬೇತಿದಾರರು ಉಪಸ್ಥಿತರಿದ್ದು ತರಬೇತಿ ನೀಡಿದರು. 249 ಮತಗಟ್ಟೆಗಳ ಬಂಟ್ವಾಳ ಕ್ಷೇತ್ರದ ಚುನಾವಣಾ ತರಬೇತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಅಂಚೆ ಮತಪತ್ರದ ಕುರಿತ ಅರ್ಜಿಯನ್ನು ಸ್ವೀಕರಿಸಲಾಯಿತು.
ಚುನಾವಣಾ ಧಿಕಾರಿ ರವಿ ಬಸರಿಹಳ್ಳಿ, ಸಹಾಯಕ ಚುನಾವಣಾ ಧಿಕಾರಿ ವೈ ರವಿ, ಎಮ್.ಸಿ.ಸಿ ನೋಡೆಲ್ ಅಧಿಕಾರಿ ಇ.ಒ.ರಾಜಣ್ಣ, ತರಭೇತಿ ಯ ಉಸ್ತುವಾರಿ ಶಿವಪ್ರಕಾಶ್ , ಉಪತಹಶೀಲ್ದಾರ ವಾಸು ಶೆಟ್ಟಿ, ಎ .ಪ್ರಕಾಶ್, ರಾಜೇಶ್ ನಾಯಕ್, ಗ್ರೀಟಾ ಮಸ್ಕರೇನಸ್, ಸೀತಾರಾಮ, ಚುನಾವಣಾ ಸಿಬ್ಬಂದಿ ಗಳಾದ ರಾಜ್ ಕುಮಾರ್, ವಿನಯನಾಗರಾಜ್, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಮತ್ತಿತರರು ಹಾಜರಿದ್ದರು.
Be the first to comment on "ಬಂಟ್ವಾಳ ಕ್ಷೇತ್ರ: ಚುನಾವಣಾ ಸಿಬ್ಬಂದಿಗೆ ತರಬೇತಿ"