ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬುಧವಾರ ಬೆಳಗ್ಗೆ ಕೇಂದ್ರ ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.
19ರಂದು ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ರಮಾನಾಥ ರೈ ಅವರು ಇತರ ನಾಯಕರೊಂದಿಗೆ ಪೂಜಾರಿ ಅವರ ನಿವಾಸಕ್ಕೆ ಬುಧವಾರ ಬೆಳಗ್ಗೆ ತೆರಳಿದರು. ಈ ಸಂದರ್ಭ ರಮಾನಾಥ ರೈಗಳು ಪೂಜಾರಿ ಅವರ ಆಶೀರ್ವಾದ ಪಡೆದರು. ರಮಾನಾಥ ರೈ ಅವರಿಗೆ ದೇವರ ದಯೆ ಇದೆ, ಬಂಟ್ವಾಳ ಜನತೆಯ ಆಶೀರ್ವಾದ ಇದೆ ಎಂದು ಹೇಳಿದ ಪೂಜಾರಿ, ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ರಮಾನಾಥ ರೈ ಅತ್ಯಧಿಕ ಅಂತರದ ಮತಗಳಿಂದ ವಿಜಯಿಯಾಗುತ್ತಾರೆ, ದೇಶದಲ್ಲಿ ಕಾಂಗ್ರೆಸ್ ಗೆ ಅಳಿವಿಲ್ಲ ಎಂದು ಹೇಳಿದರು. ಬಳಿಕ ರೈ ಯವರನ್ನು ಅವರ ವಾಹನದ ತನಕ ಬೀಳ್ಕೊಟ್ಟು ಪೂಜಾರಿಯವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಅಬ್ಬಾಸ್ ಅಲಿ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಹೆಚ್ ಖಾದರ್ ಉಪಸ್ಥಿತರಿದ್ದರು.
Be the first to comment on "ಜನಾರ್ದನ ಪೂಜಾರಿ ನಿವಾಸಕ್ಕೆ ರೈ ಭೇಟಿ"