ವಿಧಾನಸಭೆಯ ಬಂಟ್ವಾಳ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷ ಈ ಬಾರಿಯೂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ವಿಟ್ಲ ಕ್ಷೇತ್ರದ ಪ್ರಮುಖ ಭಾಗ ಬಂಟ್ವಾಳದಲ್ಲಿ ವಿಲೀನವಾದ ಬಳಿಕ ನಡೆದ ಎರಡು ಚುನಾವಣೆಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗಣನೀಯ ಮತಗಳನ್ನು ಗಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರದ ಪಕ್ಷ ಪ್ರಮುಖರ ಸಭೆ ಕ್ಷೇತ್ರಾಧ್ಯಕ್ಷ ಬಿ.ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಪಕ್ಷದ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲು ಅಮ್ಮುಂಜೆ ಅಬುಬಕ್ಕರ್, ಮಹಮ್ಮದ್ ಶಾಫಿ, ಪಿ.ಎ.ರಹೀಂ, ಪ್ರಕಾಶ್ ಗೋಮ್ಸ್, ಇಬ್ರಾಹಿಂ ಕೈಲಾರ್ ಹೆಸರುಗಳನ್ನು ಪಕ್ಷದ ಜಿಲ್ಲಾ ಸಮಿತಿಗೆ ಕಳುಹಿಸುವುದು ಎಂದು ತೀರ್ಮಾನಿಸಲಾಯಿತು.
ಜಾಹೀರಾತು
ಸಭೆಯಲ್ಲಿ ಪಕ್ಷ ಪ್ರಮುಖರಾದ ಲಕ್ಷ್ಮೀನಾರಾಯಣ ಅಡ್ಯಂತಾಯ, ಹರೀಶ್ ಕೊಟ್ಟಾರಿ, ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಅಮ್ಮುಂಜೆ ಅಬುಬಕ್ಕರ್, ಪಕ್ಷದ ಹಿರಿಯ ನೇತಾರರಾದ ಪಿ.ಎ.ರಹೀಂ, ಮಹಮ್ಮದ್ ಶಾಫಿ, ಹಾರೂನ್ ರಶೀದ್, ಇಸ್ಮಾಯಿಲ್, ಪ್ರಕಾಶ್ ಗೋಮ್ಸ್, ಇಬ್ರಾಹಿಂ ಕೈಲಾರ್ ಮೊದಲಾದವರು ಉಪಸ್ಥಿತರಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬಂಟ್ವಾಳದಲ್ಲಿ ಜೆಡಿಎಸ್ ಕಣಕ್ಕೆ, ಐದು ಹೆಸರು ಶಿಫಾರಸು"
Be the first to comment on "ಬಂಟ್ವಾಳದಲ್ಲಿ ಜೆಡಿಎಸ್ ಕಣಕ್ಕೆ, ಐದು ಹೆಸರು ಶಿಫಾರಸು"