ಬಂಟ್ವಾಳ

ಲಯನ್ಸ್ 317 ಡಿ ಜಿಲ್ಲೆಯ ಸಮ್ಮೇಳನ ಬಂಟ್ವಾಳ ಬಂಟರ ಭವನದಲ್ಲಿ ಏ.7ರಂದು

ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ನಾಲ್ಕು ಕಂದಾಯ ಜಿಲ್ಲೆಗಳನ್ನು ಹೊಂದಿರುವ 317-ಡಿ ಜಿಲ್ಲೆಯ ಆಶ್ರಯದಲ್ಲಿ “ಶ್ರೀರಾಗ” 15 ನೇ ಲಯನ್ಸ್ ಜಿಲ್ಲಾ ಸಮ್ಮೇಳನ  ಏ.7-8 ರಂದು ಬಂಟವಾಳದ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ  ದಾಮೋದರ ಬಿ.ಎಂ.ಹೇಳಿದರು.

ಜಾಹೀರಾತು

ಬುಧವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ಲಯನ್ಸ್ ಮತ್ತು ಲಯನೆಸ್ ಕ್ಲಬ್ ನ ಅತಿಥ್ಯದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಎಚ್. ಆರ್. ಹರೀಶ್ ರವರ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯಲಿದೆ ಎಂದರು.

ಲಯನ್ ಜಿಲ್ಲಾ ಪ್ರಥಮ ಮಹಿಳೆ ನಮಿತಾ ಹರೀಶ್ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ.  ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮಹಾಬಲೇಶ್ಬರ ಎಂ.ಎಸ್., ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ನ ಅಧ್ಯಕ್ಷೆ ಭಾರತಿ ನಾಗೇಶ್ , ಜಿಲ್ಲಾ ಪ್ರಥಮ ಉಪ ರಾಜ್ಯಪಾಲ ಕೆ.ದೇವದಾಸ ಭಂಡಾರಿ, ಉಪರಾಜ್ಯಪಾಲ  ರೋನಾಲ್ಡ್ ಐ.ಗೋಮ್ಸ್ ಅತಿಥಿಯಾಗಿ ಭಾಗವಹಿಸುವರು. ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ  ವಸಂತಕುಮಾರ್ ಶೆಟ್ಟಿ, ಖಜಾಂಚಿ ಸಂಜಯ್ ಎಸ್.ಜೈನ್, ಸಂಯೋಜಕ ಎಸ್.ಎಂ.ಐರನ್, ಸಾರ್ವಜನಿಕ ಸಂಪರ್ಕಾಧಿಕಾರಿ ಕದ್ರಿ ನವನೀತಶೆಟ್ಟಿ, ಲಯನೆಸ್ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ ಶ್ರೀನಿವಾಸ್, ಲಿಯೋ ಜಿಲ್ಲಾಧ್ಯಕ್ಷೆ ಪೂಜಾ ನಾಗೇಶ್  ಈ ಸಂದರ್ಭ ಉಪಸ್ಥಿತರಿರುವರು ಎಂದು ತಿಳಿಸಿದರು.

ನಾಲ್ಕು ಕಂದಾಯ ಜಿಲ್ಲೆಗಳನ್ನು ಹೊಂದಿರುವ 317- ಡಿ ವ್ಯಾಪ್ತಿಯಲ್ಲಿ ಪ್ರಸ್ತುತ ಸಾಲಿಗೆ ಹತ್ತು ನೂತನ   ಲಯನ್ಸ್ ಕ್ಳಬ್ ಗಳು ಸ್ಥಾಪನೆಗೊಂಡಿವೆ. ಈ ಸಮ್ಮೇಳನದಲ್ಲಿ ಲಯನ್ಸ್ ಜಿಲ್ಲೆಯ  ಎರಡನೆ ಗವರ್ನರ್ ಅವರ ಚುನಾವಣಾ ಪ್ರಕ್ರಿಯೆತೂ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ ಯಡಪಡಿತ್ತಾಯ, ಜಿಲ್ಲಾ ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಮೆಲ್ಕಾರ್, ಸಮ್ಮೇಳನ ಸಮಿತಿ ಕೋಶಾಧಿಕಾರಿ ಜಯಂತ ಶೆಟ್ಟಿ, ವಲಯಾಧ್ಯಕ್ಷ ಶಿವಾನಂದ ಬಾಳಿಗ, ಮುಖ್ಯ ಸಲಹೆಗಾರರಾದ ಎನ್.ಸತೀಶ ಕುಡ್ವ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.