ಮಂಗಳೂರು ವಿವಿಯ ಬಯೋಟೆಕ್ನಾಲಜಿ ವಿಭಾಗದಲ್ಲಿ ರೇಷ್ಮಾ ಎ.ಶೆಟ್ಟಿ ಅವರ ಎಪಿಜೆನಿಟಿಕ್ ಆಂಡ್ ಎನ್ವಿರೋನ್ಮೆಂಟಲ್ ಇನ್ಫ್ಲೂವೆನ್ಸಸ್ ಆಫ್ ಎ ಜೆನಟಿಕ್ ಮಾಡೆಲ್ ಆಫ್ ಅಡೋಲಸೆನ್ಸ್ ಡಿಪ್ರೆಶನ್ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್ಡಿ ಪದವಿ ನೀಡಿದೆ. ಇವರು ನ್ಯಾಯವಾದಿ ಅರುಣ್ ಶೆಟ್ಟಿ ಅವರ ಪತ್ನಿ ಹಾಗೂ ಬಯೋಟೆಕ್ನಾಲಜಿ ವಿಭಾಗದ ಪ್ರೊಫೆಸರ್ ಡಾ. ಮೋನಿಕಾ ಸದಾನಂದ ಅವರ ಬಳಿ ಮಾರ್ಗದರ್ಶನ ಪಡೆದಿದ್ದಾರೆ.