ಲೊರೆಟ್ಟೋ ಕಥೋಲಿಕ್ ಸಭಾ ಬೆಳ್ಳಿಹಬ್ಬ: ಆರೋಗ್ಯ ಉಚಿತ ತಪಾಸಣೆ

www.bantwalnews.com

ಲೊರೆಟ್ಟೊ ಕಥೋಲಿಕ್ ಸಭಾ ಘಟಕದ ಬೆಳ್ಳಿಹಬ್ಬ ಅಂಗವಾಗಿ ಲೊರೆಟ್ಟೋ ಶಾಲಾ ವಠಾರದಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸೆ ಮತ್ತು ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು 450 ಮಂದಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಕಥೋಲಿಕ್ ಸಭಾ ಲೋರೆಟ್ಟೋ ಘಟಕ, ಲೋರೆಟ್ಟೋ ಫ್ರೆಂಡ್ಸ್ ಕ್ಲಬ್, ಫಾದರ್ ಮುಲ್ಲರ್ಸ್ ಆಸ್ಪತ್ರೆ, ತುಂಬೆ-ಕಂಕನಾಡಿ, ಲೆವಿನ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತ್ರ, ಕಿವಿ, ಮೂಗು, ಇ ಸಿ ಜಿ, ಮೂಳೆ, ಜನರಲ್ ಮೆಡಿಸಿನ್, ರಕ್ತ ಪರೀಕ್ಷೆ, ಸ್ತ್ರಿ ರೋಗ, ಮಕ್ಕಳ ಚಿಕಿತ್ಸೆ,ಚರ್ಮ ಇತ್ಯಾದಿ ತಪಾಸಣೆ ಯನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಯ,ತುಂಬೆ-ಕಂಕನಾಡಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನಡೆಸಿಕೊಟ್ಟರು.

ಈ ಸಂದರ್ಭ ಲೆವಿನ್ ಸಮೂಹ ಸಂಸ್ಥೆಗಳ ಮಾಲೀಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಅವರು ಕೊಡುಗೆಯಾಗಿ ನೀಡಿದ ಕನ್ನಡಕಗಳನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಥೋಲಿಕ್ ಸಭಾ (ರಿ) ಕೇಂದ್ರೀಯ ಅದ್ಯಕ್ಷ ಅನಿಲ್ ಲೋಬೊ ಫೆರ್ಮಯ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ವಲಯ ಅಧ್ಯಕ್ಷ ರಾದ ಸ್ಟ್ಯಾನಿ ಲೋಬೊ, ಸ್ಥಾಪಕ ಅಧ್ಯಕ್ಷರಾದ ವಾಲ್ಟರ್ ನೋರೋನ್ಹ, ಲೋರೆಟ್ಟೋ ಫ್ಟೆಂಡ್ಸ್ ಕ್ಲಬ್ ಅಧ್ಯಕ್ಷರಾದ ಪ್ರಕಾಶ್ ವಾಸ್, ವೈದ್ಯಾಧಿಕಾರಿ ಕಿರಣ್ ಶೆಟ್ಟಿ, ಲೋರೆಟ್ಟೋ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರೀಚಾರ್ಡ್ ಮಿನೇಜಸ್ ಉಪಸ್ಥಿತರಿದ್ದರು.ಚರ್ಚ್ ಧರ್ಮ ಗರುಗಳಾದ ವಂ.ಎಲಿಯಸ್ ಡಿಸೋಜಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಫಾದರ್ ಮುಲ್ಲರ್ಸ್ ಆಸ್ಪತ್ರೆ ತುಂಬೆ, ಇಲ್ಲಿನ ಆಡಳಿತಾಧಿಕಾರಿಯಾದ ವಂ.ರೋಶನ್ ಉಪಸ್ಥಿತರಿದ್ದರು.  ಕಥೋಲಿಕ್ ಸಭಾ ಲೋರೆಟ್ಟೋ ಘಟಕದ ಅಧ್ಯಕ್ಷೆ ಆಶಾ ಫೆರ್ನಾಂಡಿಸ್ ಸ್ವಾಗತಿಸಿದರು, ಕಾರ್ಯದರ್ಶಿ ಐಸಾಕ್ ವಾಸ್ ವಂದಿಸಿದರು. ಸಿಪ್ರಿಯನ್ ಡಿಸೋಜಾ ಕಾರ್ಯಕಮ ನಿರೂಪಿಸಿದರು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಲೊರೆಟ್ಟೋ ಕಥೋಲಿಕ್ ಸಭಾ ಬೆಳ್ಳಿಹಬ್ಬ: ಆರೋಗ್ಯ ಉಚಿತ ತಪಾಸಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*