ಕಲ್ಲಡ್ಕ

ಕೊಲುವುದು ಮಹಾತಪ್ಪು, ರಾಜಕೀಯಗೊಳಿಸುವುದು ರಾಕ್ಷಸೀ ಪ್ರವೃತ್ತಿ

ಯಾವ ಧರ್ಮವೂ ಮನುಷ್ಯರನ್ನು ಕೊಲ್ಲಲು ಹೇಳೋಲ್ಲ, ಹೇಳಿದರೆ ಧರ್ಮವೇ ಅಲ್ಲ ಎಂದು ಸಾಮರಸ್ಯ ನಡಿಗೆ ಸಮಾರೋಪದಲ್ಲಿ ಪ್ರಕಾಶ್ ರೈ ಖಡಕ್ ನುಡಿ

www.bantwalnews.com REPORT

ಜಾಹೀರಾತು

ಸಾಮರಸ್ಯದೆಡೆಗೆ ಸೌಹಾರ್ದ ನಡಿಗೆ ಮುಕ್ತಾಯಗೊಂಡಿದೆ. ಸಮಾರೋಪ ಸಮಾರಂಭ ಮಾಣಿ ಸಮೀಪ ನೇರಳಕಟ್ಟೆಯಲ್ಲಿ ಮಂಗಳವಾರ ಇಳಿಸಂಜೆ ನಡೆಯಿತು. ನಿರೀಕ್ಷೆಯಂತೆ ಬಹುಭಾಷಾ ನಟ ಪ್ರಕಾಶ್ ರೈ ಆಗಮಿಸಿ ಪ್ರಮುಖ ಭಾಷಣ ಮಾಡಿದರು. ಅವರು ಏನು ಹೇಳಿದರು, ಇಲ್ಲಿದೆ ಹೈಲೈಟ್ಸ್.

ಇಡೀ ದಿನದ ಕಾಲ್ನಡಿಗೆಯ ಜಾಥಾ ಮುಂಚೂಣಿ ವಹಿಸಿದ ರಮಾನಾಥ ರೈ ನಡಿಗೆಯ ಉದ್ದೇಶದ ಕುರಿತು ಮಾತನಾಡಿದರು. ಅವರು ಹೇಳಿದ್ದು ಹೀಗೆ.

ಕಾನೂನಿನ ವಿರುದ್ಧವಾಗಿ ತಾನು ಎಂದೂ ನಡೆಕೊಂಡಿಲ್ಲ. ಇನ್ನೊಂದು ಧರ್ಮವನ್ನು ಪ್ರೀತಿಸುವುದು ಕೋಮುವಾದ ಎಂದು ಟೀಕಿಸುವುದಾದರೆ ತಾನು ಅದನ್ನು ಸ್ವಾಗತಿಸುತ್ತೇನೆ. ಸಾಮರಸ್ಯಕ್ಕೆ ಜಾತಿಮತದ ಹಂಗಿಲ್ಲ ಎನ್ನುವುದನ್ನು ..ಜಿಲ್ಲೆಯ ಜಾತ್ಯಾತೀತ ಪಕ್ಷಗಳು, ಸಂಘಟನೆಗಳು  ತೋರಿಸಿಕೊಟ್ಟಿವೆ. ಫರಂಗಿಪೇಟೆಯಿಂದ ಮಾಣಿವರೆಗೆ ಮಾತ್ರವಲ್ಲ. ಪ್ರತಿಯೊಬ್ಬರೂ ಜೀವನ ಪರ್ಯಂತ ಒಟ್ಟಾಗಿ ನಡೆಯುವ ಸಂಕಲ್ಪ ತೊಡಬೇಕಾಗಿದೆ. ದೇವರು, ಧರ್ಮ, ದೇಶ ಪ್ರೇಮದ ಹೆಸರಿನಲ್ಲಿ  ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಗಳಾಗುತ್ತಿದೆ. ಸಾಮಾಜಿಕ ಸಾಮರಸ್ಯಕ್ಕೆ ತೊಂದರೆಯಾದಾಗ ಒಗ್ಗಟ್ಟಾಗಬೇಕು.

ಮಾಜಿ ಶಾಸಕ ಶ್ರೀರಾಮ ರೆಡ್ಡಿ ಹಾಗೂ ಸಿಪಿಐ ರಾಜ್ಯ ಮುಖಂಡ  ಡಾ.ಸಿದ್ದನಗೌಡ ಪಾಟೀಲ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು. ಆಹಾರ ಸಚಿವ ಯು.ಟಿ.ಖಾದರ್, ಶಾಸಕ ಅಭಯಚಂದ್ರಜೈನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಗೇರು ನಿಗಮ ಅಧ್ಯಕ್ಷ ಬಿ.ಹೆಚ್.ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ರೋಡ್ರಿಗಸ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮುಹಮ್ಮದ್, ಶಾಹುಲ್ ಹಮೀದ್, ಮಮತಾಗಟ್ಟಿ, ಮಂಜುಳ ಮಾಧವ ಮಾವೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ .ಸಿ.ಭಂಡಾರಿ, ರೈತ ಸಂಘದ ರವಿಕಿರಣ್ ಪುಣಚ, ತುರವೇ ಅಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು, ವಿವಿಧ ಪಕ್ಷದ ಪ್ರಮುಖರಾದ ಕೋಡಿಜಾಲ್ ಇಬ್ರಾಹೀಂ, ಎಂ. ದೇವದಾಸ್, ಬಾಲಕೃಷ್ಣ ಶೆಟ್ಟಿ, ವಿ.ಕುಕ್ಯಾನ್, ರಘು ಎಕ್ಕಾರ್, ಚಂದು ಎಲ್, ಯು.ಕೆ.ಕಣಚೂರು ಮೋನು, ಮುಹಮ್ಮದ್ ಕುಂಞಿ, ಯಾದವ ಶೆಟ್ಟಿ, ಸ್ಟ್ಯಾನಿ ಲೋಬೋ, ಮಿಥುನ್ ರೈ, , ಸುನಿಲ್ ಕುಮಾರ್ ಬಜಾಲ್ಕರುಣಾಕರ, .ಸಿ ಜಯರಾಜ್, ಲತೀಫ್ ನೇರಳಕಟ್ಟೆ, ಹಿರಿಯ ವಕೀಲರುಗಳಾದ ಟಿ.ನಾರಾಯಣ ಪೂಜಾರಿ, ಯಶವಂತ ಮರೋಳಿ, ಮಾಯಿಲಪ್ಪ ಸಾಲಿಯಾನ್, ಉಮರ್ ಫಾರೂಕ್ ಫರಂಗಿಪೇಟೆ ಮತ್ತಿತರರು ಇದ್ದರು. ಡಿವೈಎಫ್ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿ ಪ್ರಸ್ತಾವಿಸಿದರು. ವಕೀಲ ಬಿ.ಎಂ. ಹನೀಫ್ ವಂದಿಸಿದರು. ನೌಫಾಲ್ ಕುಡ್ತಮುಗೇರು, ಬಾಲಕೃಷ್ಣ ಆಳ್ವ ಕೋಡಾಜೆ ನಿರೂಪಿಸಿದರು.

 

Other Link about SAMARASYA NADIGE:

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.