ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಯ ಬದುಕಿಗೆ ನಾಯಕತ್ವ ಗುಣ ಬೆಳೆಸುವ ಪ್ರಯೋಗಾಲಯ ಎಂದು ಸಿದ್ಧಕಟ್ಟೆ ಸರಕಾರಿ ಪದವಿ ಪರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮತ್ತು ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪ್ರಫುಲ್ಲ ರೈ ಹೇಳಿದರು.
ಸಿದ್ಧಕಟ್ಟೆ ಸರಕಾರಿ ಪದವಿ ಪರ್ವ ಕಾಲೇಜಿನಲ್ಲಿ ನಡೆದ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಎಸ್.ವಿ.ಎಸ್. ಕಾಲೇಜಿನ ಉಪಪ್ರಾಂಶುಪಾಲ ಪ್ರೆ. ತುಕಾರಾಂ ಪೂಜಾರಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಬದುಕನ್ನು ಅರ್ಥ ಮಾಡಿಕೊಳ್ಳುವ ಒಂದು ವೇದಿಕೆ. ಹೃದಯ ಭಾಷೆಯನ್ನು ಕಲಿಸುವ ಒಂದು ಮಾಧ್ಯಮ ಎಂದು ಹೇಳಿದರು.
ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ, ಎನ್.ಎಸ್.ಎಸ್ ಶಿಬಿರದಲ್ಲಿ ಪಡೆದ ಅವಕಾಶಗಳನ್ನು ಜೀವನುದ್ದಕ್ಕೂ ಆಳವಡಿಸಿಕೊಂಡು ಸ್ವಾವಲಂಬನೆ ಬದುಕಿಗೆ ಹೆಚ್ಚಿನ ಒತ್ತು ಕೊಟ್ಟು ನಾಯಕತ್ವ ಗುಣ ಬೆಳವಣಿಗೆ ಜತೆ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಪೂಜಾರಿ ಹಲಕ್ಕೆ, ಸಿದ್ಧಕಟ್ಟೆ ಸರಕಾರಿ ಪದವಿ ಪರ್ವ ಕಾಲೇಜು ಪ್ರಾಂಶುಪಾಲ ಶ್ರೀನಿವಾಸ ನಾಯ್ಕ, ಸರಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲ ರಮಾನಂದ ಎನ್., ಸರಕಾರಿ ಪದವಿ ಪರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅರ್ಕಕೀರ್ತಿ ಇಂದ್ರ, ಸರಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಸೀತಾರಾಮ ಶಾಂತಿ, ನಿವೃತ್ತ ಉಪಅರಣ್ಯ ಸಂರಕ್ಷಣಾಧಿಕಾರಿ ದಾಮೋದರ ಶೆಟ್ಟಿಗಾರ್, ಎನ್.ಎಸ್.ಎಸ್. ಘಟಕ ನಾಯಕರಾದ ಸುಮಂತ್ ಎಸ್. ಕೆ, ಕೀರ್ತನ್, ಪ್ರತೀಕ್ಷಾ ಮತ್ತು ಪಂಚಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಗಬೆಟ್ಟು ಗ್ರಾ.ಪಂ. ಪಿಡಿಓ ಸಿಲ್ವಿಯಾ ಫೆರ್ನಾಂಡಿಸ್, ಸಂಗಬೆಟ್ಟು ಗ್ರಾ.ಪಂ. ಸದಸ್ಯ ಮಾಧವ ಶೆಟ್ಟಿಗಾರ್, ಎಸ್.ವಿ.ಎಸ್. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ನಾರಾಯಣ ಭಂಡಾರಿ, ಎಸ್.ವಿ.ಎಸ್. ಕಾಲೇಜಿನ ಕಛೇರಿ ಮೇಲ್ವಿಚಾರಕ ರಾಧೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಹಶಿಬಿರಾಧಿಕಾರಿಗಳಾದ ಪ್ರದೀಪ್ ಪೂಜಾರಿ, ಉಲ್ಲೇಖ ಜೈನ್, ಅನಿಲ್, ಸಂಗೀತಾ ಶಾನ್‌ಬೋಗ್ ಮತ್ತು ಸುಷ್ಮಾ ಸಹಕರಿಸಿದರು.
ಶಿಬಿರಾರ್ಥಿ ದೀಪಿಕಾ ಶಿಬಿರದ ವರದಿ ವಾಚಿಸಿದರು. ಶಿಬಿರಾರ್ಥಿಗಳಾದ ಶ್ರೇಯಾ ಎಂ.ಎನ್., ಚರಿತ್ ಕುಮಾರ್, ಸುಮಂತ್ ಎಸ್. ಕೆ. ಮತ್ತು ಶ್ರೀಕಾಂತ್ ನಾಯಕ್ ಅನಿಸಿಕೆ ಅಭಿವ್ಯಕ್ತಪಡಿಸಿದರು.
ಶಿಬಿರಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಆಶಯ ಗೀತೆ ಹಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ -I ರ ಶಿಬಿರಾಧಿಕಾರಿ ಡಾ. ಮಂಜುನಾಥ ಉಡುಪ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ – IIರ ಶಿಬಿರಾಧಿಕಾರಿ ಕಿಟ್ಟು ರಾಮಕುಂಜ ವಂದಿಸಿದರು. ಶಿಬಿರಾರ್ಥಿ ಸುದರ್ಶನ್ ಡಿ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
Be the first to comment on "ನಾಯಕತ್ವ ಗುಣ ಬೆಳೆಸುವ ಪ್ರಯೋಗಾಲಯ ರಾಷ್ಟ್ರೀಯ ಸೇವಾ ಯೋಜನೆ"