ಇತರರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನನ್ನದು ಎಂದು ಹೇಳಲಿಲ್ಲ. ಕ್ಷೇತ್ರದ ಮತದಾರರಿಗೆ ಅಗೌರವ ಉಂಟುಮಾಡಲಿಲ್ಲ. ಸ್ವಚ್ಛ ಹಾಗೂ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದ್ದೇನೆ. ಅಭಿವೃದ್ಧಿ ಕಾರ್ಯಗಳ ಮೂಲಕ ನ್ಯಾಯ ಒದಗಿಸಿದ್ದೇನೆ. ಅಭಿವೃದ್ಧಿ ಮತದಾರ ಬಾಂಧವರ ಋಣ ತೀರಿಸುವ ಕಾರ್ಯ ಮಾಡಿದ್ದೇನೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಂಟ್ವಾಳದ ನಾನಾ ಕಡೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಹೇಳಿದ್ದು ಹೀಗೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ , ಬಂಟ್ವಾಳ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳಿಗಾಗಿ 6 ಯೋಜನೆಗಳು ಈಗಾಗಲೆ ಮಂಜೂರುಗೊಂಡಿದ್ದು, ಟೆಂಡರು ಪ್ರಕ್ರಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಇನ್ನೂ 2 ಯೋಜನೆಗಳು ಮಂಜೂರಾತಿ ಹಂತದಲ್ಲಿದೆ ಎಂದರು.
ಮೂರ್ಜೆ–ನೇರಳಕಟ್ಟೆ ರಸ್ತೆಗೆ 1.8 ಕೋ. ರೂ., ಕಾಡಬೆಟ್ಟು–ಬಸ್ತಿಕೋಡಿ ರಸ್ತೆಗೆ 3.45 ಕೋ.ರೂ., ಕರಿಮಲೆ– ಅಣ್ಣಳಿಕೆ ರಸ್ತೆಗೆ 4 ಕೋ. ರೂ. , ಬಿ.ಸಿ.ರೋಡ್ ಜಂಕ್ಷನ್–ಪಾಣೆಮಂಗಳೂರು ವೃತ್ತ ರಸ್ತೆಗೆ 3.5 ಕೋ. ರೂ., ಗೋಳ್ತಮಜಲು–ಮಂಚಿ ರಸ್ತೆಗೆ ೨ ಕೋ.ರೂ. , ಕೊಳ್ನಾಡು ಗ್ರಾಮದ ಅಗರಿ–ಕುಲಾಲು ರಸ್ತೆ, ನೆಕ್ಕರಕಾಡು ಸೇತುವೆ ನಿರ್ಮಾಣಕ್ಕೆ ೫ ಕೋ. ರೂ. ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಶಿಲಾನ್ಯಾಸ ನೆರವೇರಿಸಿದರು.
Be the first to comment on "ಮತದಾರ ಬಾಂಧವರ ಋಣ ತೀರಿಸುವ ಕಾರ್ಯ: ರೈ"