www.bantwalnews.com
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮಂಥನ ಘಟಕಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಟಿಪ್ಪು ಜಯಂತಿ ಆಚರಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಹತ್ಯೆ-ಹಿಂಸಾಚಾರವನ್ನು ನಡೆಸುವುದಕ್ಕೆ ಅವಕಾಶ ನೀಡುವ ಬದಲು ರಾಷ್ಟ್ರದ ಐಕ್ಯತೆ ಸಮಾನತೆಗೆ ಕಾರಣೀಭೂತರಾದ ಮಹಾಪುರುಷರನ್ನು ನೆನಪಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಜನರಲ್ಲಿ ಇನ್ನಾದರೂ ನೈಜ ಇತಿಹಾಸವನ್ನು ತಿಳಿಯುವ ಭಾವನೆ ಬರಬೇಕಾಗಿದೆ. ಇತಿಹಾಸದ ಮೇಲಿನ ವಿಕೃತಿಯನ್ನು ತೊಡೆದು ಅದು ಸಂಸ್ಕೃತಿಯೆಡೆಗೆ ದಾರಿ ತೋರಿಸುವಂಥ ಕೆಲಸವನ್ನು ’ಮಂಥನ’ ಬಳಗ ಮಾಡುತ್ತಿದೆ ಎಂದು ಹೇಳಿದರು.
ಇತಿಹಾಸದ ಪುಟಗಳಲ್ಲಿ ಟಿಪ್ಪು ಮೈಸೂರಿನ ಹುಲಿ, ಸ್ವಾತಂತ್ರ್ಯ ಹೋರಾಟಗಾರ, ಕನ್ನಡಾಭಿಮಾನಿ, ಪರಮಧರ್ಮ ಸಹಿಷ್ಣು, ದೇವಾಲಯಗಳ ಜೀರ್ಣೋದ್ಧಾರ ನಡೆಸಿದವನೆಂಬ ವಿವರಗಳಿದ್ದು, ಅವುಗಳಲ್ಲಿ ಹುರುಳಿಲ್ಲ ಎಂದು ಪೀಲ್ಡ್ ಮಾರ್ಷಲ್ ಕೆ.ಎಮ್ ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ| ಮಾಧವ ರಾವ್ ಈ ಸಂದರ್ಭ ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿಕರು, ನ್ಯಾಯವಾದಿಗಳು, ವೈದ್ಯರು, ಗೃಹಿಣಿಯರು, ಇಂಜಿನಿಯರ್‌ಗಳು ಹಾಗೂ ಶಿಕ್ಷಕರು ಸೇರಿದಂತೆ 120ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಟಿಪ್ಪೂ ನಿಜಸ್ವರೂಪ ಎಂಬ ಪ್ರದರ್ಶಿನಿಯನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಕೃಷ್ಣ ಪ್ರಸಾದ ಕಾಯರ್‌ಕಟ್ಟೆ ಸ್ವಾಗತಿಸಿ ವಂದಿಸಿದರು.
Be the first to comment on "ರಾಷ್ಟ್ರದ ಐಕ್ಯತೆಗೆ ಕಾರಣರಾದ ಮಹಾಪುರುಷರ ಸ್ಮರಿಸಿ: ಡಾ. ಪ್ರಭಾಕರ ಭಟ್ ಕಲ್ಲಡ್ಕ"