ಕನ್ಯಾನ ದ ಕ ಜಿ ಪಂ ಸ ಮಾ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ವತಿಯಿಂದ ಬೆಳಗಿನ ಉಪಾಹಾರ ಯೋಜನೆಗೆ ಸಚಿವ ಬಿ.ರಮಾನಾಥ ರೈ ಗುರುವಾರ ಚಾಲನೆ ನೀಡಿದರು.
ಬೆಳಗ್ಗಿನ ಉಪಾಹಾರ ಯೋಜನೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಪೂರಕ ಯೋಜನೆ ಎಂದು ಈ ಸಂದರ್ಭ ಅವರು ಹೇಳಿದರು.
ಕನ್ಯಾನ ಗ್ರಾ.ಪಂ.ಅಧ್ಯಕ್ಷೆ ದೇವಕಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಕನ್ಯಾನ ಗ್ರಾ.ಪಂ.ಉಪಾಧ್ಯಕ್ಷ ಕೆ.ಪಿ.ಅಬ್ದುಲ್‌ರಹಿಮಾನ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ಮಿತ್ತಳಿಕೆ, ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾ ಸಂಸ್ಥೆಯ ನಿವೃತ್ತ ಪ್ರಂಶುಪಾಲ ಕೆ.ಎಸ್.ಪ್ರಭು, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಗ್ರಾ.ಪಂ.ಸದಸ್ಯರಾದ ಅಬ್ದುಲ್‌ಮಜೀದ್, ವಾಲ್ಟರ್ ಡಿಸೋಜಾ, ನಿವೃತ್ತ ಮುಖ್ಯೋಪಾಧ್ಯಾಯ ಯು.ದೇವಪ್ಪ ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಮ್ಮದ್ ಫಜಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಸೈನಾರ್ ಮತ್ತಿತರರು ಉಪಸ್ಥಿತರಿದ್ದರು.
ಕನ್ಯಾನ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸೂರ್ಯನಾರಾಯಣ ಭಟ್ ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ನಾರಾಯಣ ಗೌಡ ಪ್ರಸ್ತಾವನೆಗೈದರು. ಶಾಲಾ ಶಿಕ್ಷಕಿ ಲೀಲಾವತಿ ವಂದಿಸಿದರು. ಶಿಕ್ಷಕಿ ಶೀಲಾವತಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಕನ್ಯಾನ ಶಾಲೆಯಲ್ಲಿನ್ನು ಮಕ್ಕಳಿಗೆ ಬೆಳಗಿನ ಉಪಾಹಾರ"