- ಡಾ.ಎ.ಜಿ.ರವಿಶಂಕರ್
ಈಗಿನ ಕಾಲದಲ್ಲಿ ಕಟ್ಟಿಗೆ ಒಲೆಯ ಬಳಕೆಯೇ ವಿರಳವಾಗತೊಡಗಿದೆ. ಆದರೆ ಕಟ್ಟಿಗೆ ಉರಿದು ದೊರಕುವ ಮಸಿಯು ಹಲವಾರು ಸಂದರ್ಭಗಳಲ್ಲಿ ರಾಮ ಬಾಣವಾಗಿದೆ.
- ಸೊಳ್ಳೆ, ಜೆನುನೋಣ ,ಕೀಟಗಳು ಕಡಿದಾಗ ಮಸಿಯನ್ನು ಪುಡಿಮಾಡಿ ಸ್ವಲ್ಪ ಜೇನುತುಪ್ಪದಲ್ಲಿ ಕಲಸಿ ಹಚ್ಚಿದರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ ಮತ್ತು ನಂಜು ಕರಗಿ ಹೋಗುತ್ತದೆ.
- ಕಾಫಿ ,ಚಹಾ ಇತ್ಯಾದಿಗಳಿಂದ ಹಲ್ಲುಗಳಲ್ಲಿ ಕಲೆ ಆಗಿದ್ದರೆ ಮಸಿಯನ್ನು ಹಾಕಿ ಉಜ್ಜಬೇಕು. ಇದರಿಂದ ಹಲ್ಲು ಶುಭ್ರವಾಗುತ್ತದೆ.
- ಹಾವು ಕಡಿದ ಜಾಗಕ್ಕೆ ಮಸಿಯನ್ನು ಹಚ್ಚಿದರೆ ಅದು ವಿಷವನ್ನು ಹೀರುತ್ತದೆ. ಇದನ್ನು ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು.
- ಮುಖದ ಮೊಡವೆಗಳ ಮೇಲೆ ಮಸಿಯನ್ನು ಜೇನುತುಪ್ಪದಲ್ಲಿ ಕಲಸಿ ಹಚ್ಚುವುದರಿಂದ ಮೊಡವೆಗಳು ವಾಸಿಯಾಗುತ್ತವೆ.
- ದೇಹದಲ್ಲಿ ಕುರ ಮೂಡಿದಾಗ ಮಸಿಯನ್ನು ಪುಡಿಮಾಡಿ ಬೆಣ್ಣೆಯಲ್ಲಿ ಕಲಸಿ ಕುರದ ಮೇಲೆ ಹಚ್ಚಿದರೆ ನೋವು ಹಾಗು ಬಾವು ಕಡಿಮೆಯಾಗುತ್ತದೆ ಅಥವಾ ಬೇಗನೆ ಹಣ್ಣಾಗಿ ಕೀವು ಹೊರಗೆ ಬರುತ್ತದೆ.
- ಹೊಟ್ಟೆ ಉಬ್ಬರಿಸುವಿಕೆ ಇದ್ದಾಗ ಸಾಧಾರಣ 500 ಮಿ.ಗ್ರಾಂ ನಷ್ಟು ಮಸಿಯನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
- ಮಸಿಯ ಸೇವನೆಯಿಂದ ಮಧ್ಯದ ಅಮಲು ಕಡಿಮೆಯಾಗುತ್ತದೆ.
- ವಿಷ ಅಥವಾ ನಂಜು ಶರೀರವನ್ನು ಸೇರಿದಾಗ ಸಣ್ಣ ತುಂಡು ಮಸಿಯನ್ನು ತಿನ್ನಿಸಬೇಕು.ಇದು ವಿಷ ನಿವಾರಣೆಗೆ ಪ್ರಥಮ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ.
- ಸರಿಯಾದ ಪ್ರಮಾಣದಲ್ಲಿ ವಯೋ ಅನುಸಾರ ನಿಯಮಿತವಾಗಿ ಮಸಿಯನ್ನು ಸೇವಿಸುವುದರಿಂದ ಸಂಧುಗಳು ದ್ರುಢವಾಗುತ್ತವೆ ಮತ್ತು ನೋವು ಕಡಿಮೆಯಾಗುತ್ತದೆ.
- ನಿಯಮಿತವಾದ ಮಸಿಯ ಸೇವನೆಯು ಶರೀರದ ಕೆಟ್ಟ ಕೊಬ್ಬಿನ ಅಂಶವನ್ನು ಕರಗಿಸುತ್ತದೆ.
- ಮಸಿಯು ಹೃದಯ,ಮಾಂಸ,ನರ ಇತ್ಯಾದಿಗಳಿಗೆ ಬಲದಾಯಕವಾಗಿದ್ದು ವಯೋಸಹಜವಾದ ಕ್ಷೀಣತೆಯನ್ನು ತಡೆಗಟ್ಟಲು ಸಹಕರಿಸುತ್ತದೆ
ಜಾಗ್ರತೆ:
- ಮಸಿ ಸೇವಿಸುವ ಮೊದಲು ವಿಷ ರಹಿತವಾದ ಮರದ್ದು ಎಂದು ದೃಢ ಪಡಿಸಿಕೊಳ್ಳುವುದು ಉತ್ತಮ.
- ಪ್ರಮಾಣಕ್ಕಿಂತ ಅಧಿಕವಾದ ಮಸಿ ಸೇವನೆಯಿಂದ ಅತಿಯಾದ ಬಾಯಾರಿಕೆಯಾಗುತ್ತದೆ ಮತ್ತು ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ.
Be the first to comment on "ಕೀಟ ಕಡಿತದ ಗಾಯವೇ? ಕಟ್ಟಿಗೆ ಮಸಿ ಜೇನುತುಪ್ಪದಲ್ಲಿ ಕಲಸಿ ಹಚ್ಚಿ.."