ಬಂಟ್ವಾಳ ಲಯನ್ಸ್ ಕ್ಲಬ್ ಗೆ ಪ್ರಾಂತ್ಯ ೬ರ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಜಗದೀಶ ಎಡಪಡಿತ್ತಾಯ ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷರಾದ ತುಪ್ಪೆಕಲ್ಲು ನರಸಿಂಹ ಶೆಟ್ಟಿ, ಹಾಗೂ ಜಿ.ಆರ್.ಆರ್ ಲೋಕೆಶ್ ಬೋಳಾರ್, ವಲಯ ಅಧ್ಯಕ್ಷರಾದ ಶಿವಾನಂದ ಬಾಳಿಗ, ಲಯನೆಸ್ ಅಧ್ಯಕ್ಷೆ ಚಿತ್ರ ಎಡಪಡಿತ್ತಾಯ, ಲಯನ್ ಕಾರ್ಯದರ್ಶಿ ರಾಮಕೃಷ್ಣ ರಾವ್, ಸುಜಾತ ರವಿಶಂಕರ್, ಕೋಶಾಧಿಕಾರಿ ರೋಹಿತಾಶ್ವ ಎಂ ಮತ್ತು ವಸಂತಿ ಲೋಕನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುರುನಮನ ಕಾರ್ಯಕ್ರಮದಲಿ ರಾಜ್ಯ ಉತ್ತಮ ಶಿಕ್ಷಕ ಪುರಸ್ಕೃತ ರಮೇಶ್ ಬಾಯಾರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶೇಖ್ ಆದಂ ಸಾಹೇಬ್, ಹಾಗೂ ನಾರಾಯಣ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಸೆಪ್ಟೆಂಬರ್ ತಿಂಗಳ ಬುಲೆಟಿನ್ ಬಂಟ್ವಾಳ ಲಯನ್ಸ್ ಅನ್ನು ಜಿಲ್ಲಾ ಕ್ಯಾಬಿನೆಟ್ ಸೆಕ್ರಟರಿ ವಸಂತಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು. ಕ್ಲಬ್ ಸೇವಾ ಕಾರ್ಯಕ್ರಮಗಳ ವರದಿಯನ್ನು ಕ್ಲಬ್ ಸರ್ವಿಸ್ ಕೊಡಿನೆಟರ್ ದಾಮೋದರ ಬಿ.ಎಂ. ನೀಡಿದರು. ಶಾಲೆಗೆ ಕಂಪ್ಯೂಟರ್, ಮಾನಸಿಕ ರೋಗಿಗೆ ಬೇಕಾದ ಮದ್ದು, ಸರ್ಕಾರಿಆಸ್ಪತ್ರೆಗೆ ಟ್ರಾಲಿ ಸ್ಟ್ರಚ್ಚರ್, ಟಾರ್ಚ ಹಾಗೂ ೮ ರಕ್ತದೊತ್ತಡ ಪರೀಕ್ಷಾ ಸಾಧನಗಳನ್ನು ನೀಡಲಾಯಿತು.
Be the first to comment on "ಲಯನ್ಸ್ ಗವರ್ನರ್ ಭೇಟಿ"