ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದೇ ಒಡಿಯೂರು ಯೋಜನೆಯ ಉದ್ದೇಶವಾಗಿದೆ ಎಂದು ಒಡಿಯೂರು ಶ್ರೀ ಗ್ರಾಮ ವಿಕಾಸದ ಯೋಜನೆಯ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಅವರು ಹೇಳಿದರು.
ಭಾರತ ಸರಕಾರದ ದತ್ತೋಪಂತ್ ಥೇಂಗಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ, ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಹಾಗೂ ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಬಂಟ್ವಾಳ ತಾಲೂಕು ವತಿಯಿಂದ ಒಡಿಯೂರು ಶ್ರೀ ಕ್ಷೇತ್ರದಲ್ಲಿ ನಡೆದ ಅಸಂಘಟಿತ ಕಾರ್ಮಿಕರ 2 ದಿನಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಹಕ್ಕು, ಯೋಜನೆ, ಶಿಕ್ಷಣ, ಆರೋಗ್ಯ ಸೌಲಭ್ಯಗಳ ನೆರವು ಮಾಹಿತಿ ಪಡೆದು ಕಾರ್ಮಿಕ ವರ್ಗ ಸದೃಢವಾಗಬೇಕಿದೆ ಎಂದವರು ತಿಳಿಸಿದರು.
ವಿಟ್ಲ ಶಿಶು ಮತ್ತು ಮಹಿಳಾ ಯೋಜನಾಧಿಕಾ ರಿ ಸುಧಾ ಜೋಷಿ, ಕರೋಪಾಡಿ ಗ್ರಾಮ ಘಟ ಸಮಿತಿ ಅಧ್ಯಕ್ಷೆ ನಾಗವೇಣಿ ಟಿ. ಶೆಟ್ಟಿ, ಕನ್ಯಾನ ಗ್ರಾಮ ಸೇವಾರ್ಥಿ ರಾಧಾಕೃಷ್ಣ ಕನ್ಯಾನ, ಕ್ಷೇತ್ರದ ಕಾರ್ಯಕರ್ತ ಸಂತೋಷ ಭಂಡಾರಿ ಉಪಸ್ಥಿತರಿದ್ದರು.
ಕಾರ್ಮಿಕ ಶಿಕ್ಷಣ ಅಧಿಕಾರಿ ಸತೀಶ್ ಕುಮಾರ್ ಅವರ ಕಾರ್ಮಿಕ ಯೋಜನೆಯ ಬಗ್ಗೆ ಪ್ರಸ್ತಾವನೆ ಗೈದರು. ಪಂಚಾಯತ್ ತರಬೇತುದಾರ ಮಂಜು ವಿಟ್ಲ, ಪತ್ರಕರ್ತ ಫಾರೂಕ್ ಬಂಟ್ವಾಳ ಮಾಹಿತಿ ಸಂವಾದ ನಡೆಸಿದರು. ಯೋಜನಾ ಕಚೇರಿ ಸಿಬ್ಬಂದಿ ವೀಕ್ಷಾ ಸ್ವಾಗತಿಸಿ, ಸೇವಾ ದೀಕ್ಷಿತ ವಿಠಲಾಚಾರ್ಯ ವಂದಿಸಿದರು. ಸಂಯೋಜಕಿ ಲೀಲಾ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಸರಕಾರಿ ಯೋಜನೆ ಜನರತ್ತ ಕೊಂಡೊಯ್ಯುವುದೇ ಒಡಿಯೂರು ಯೋಜನೆಯ ಉದ್ದೇಶ: ಸದಾಶಿವ ಅಳಿಕೆ"