ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ16: ಪ್ರೂಫ್, ಇಲ್ಲವಾದರೆ ಒರಿಜಿನಲ್ ಆದರೂ ಬೇಕು

ಮಂಗಳೂರು ಕೊಡಿಯಾಲಬೈಲಿನ ಏಕಮಾತ್ರ ವೃತ್ತದಲ್ಲಿ ದೊಡ್ಡದೊಂದು ನಿಯಾನ್ ಫಲಕ ಹೊತ್ತಿದ್ದ ನವಭಾರತ ಆಡಳಿತ ಕಚೇರಿಯನ್ನು ಮೊದಲ ಬಾರಿ ಪ್ರವೇಶಿಸಿದಾಗಲೇ ನವಭಾರತದ ‘ವಿಶಿಷ್ಟ ಸಂಸ್ಕೃತಿಯ ಪರಿಚಯವಾಯಿತು.
 
ನೌಕರಿ ದೊರಕಿಸಿಕೊಳ್ಳಬೇಕಾದರೆ ಯಾರನ್ನು ಕಾಣಬೇಕೆಂಬುದರ ಬಗ್ಗೆ ಪೂರ್ವಭಾವಿ ಮಾಹಿತಿ ಬೇಕಿತ್ತುಬೆಂಗಳೂರಿನಲ್ಲಿ ಹಿಂದೊಮ್ಮೆ ಕಂಡು ಪರಿಚಯವಾಗಿದ್ದ ಉಪಸಂಪಾದಕರೊಬ್ಬರ ಹೆಸರು ಹೇಳಿ… ರವಿ ಕಾಣಬಹುದೇ?” ಎಂದು ವಿಚಾರಿಸಿದೆ.
 
ಎಡಿಟೋರಿಯಲ್ಲಿಗೆ ಯಾರಿಗೂ ಎಡ್ಮಿಶನ್ ಇಲ್ಲಯಾರನ್ನೂ ಡ್ಯೂಟಿಯಲ್ಲಿ ಇರುವಾಗ ಕರೆಯುವ ರೂಲ್ಸೂ ಇಲ್ಲವೆಂಬ ಒರಟು ಉತ್ತರದಿಂದ ತಬ್ಬಿಬ್ಬಾಗದೆ,
 
ನಾನು ಬೆಂಗಳೂರಿನಿಂದ ಬಂದಿದ್ದೇನೆಅವರ ಮನೆ ವಿಳಾಸವೂ ಗೊತ್ತಿಲ್ಲಭೇಟಿ ಸಾಧ್ಯವಿಲ್ಲವಾದರೆಅವರ ವಿಳಾಸವಾದರೂ ಕೊಡಬಹುದೆ?” ಎಂದು ವಿನಯ ಪ್ರದರ್ಶನ ಮಾಡಿದುದು ಫಲಕಾರಿಯಾಯಿತುಒಂದೂವರೆ ಫರ್ಲಾಂಗ್ ದೂರದ ಸಂಪಾದಕೀಯ ಸ್ಥಾವರದಿಂದ ನಾನು ಕೇಳಿದ್ದವರನ್ನು (ಐದು ನಿಮಿಷದ ಮಟ್ಟಿಗೆಕರೆಸಲಾಯಿತುಬೇಕಾದ ಮಾಹಿತಿಯೂ ದೊರೆಯಿತು.
 
ಅವರಿತ್ತ ಮಾಹಿತಿ ಪ್ರಕಾರನವಭಾರತದ ‘ಸಕಲ ಕಾರ್ಯಭಾರ ನಿರ್ವಾಹಕ’ – ಅಥವಾ ಎಲ್ಲರೂ ಗುರುತಿಸುವಂತೇಮ್ಯಾನೇಜಿಂಗ್ ಡೈರೆಕ್ಟರ್’ ಅರ್ಥಾತ್ ‘ಎಂ.ಡಿ.’ ಸಂಜೀವ ವಿ.ಕುಡ್ವರಿಗೆ ನನ್ನನ್ನು ಪರಿಚಯ ಮಾಡಿಸಲು ಸಂಪಾದಕೀಯ ಶಾಖೆಯ ಹಿರಿಯ ರಘುವೀರ ಶೆಟ್ಟಿಯವರ ನೆರವು ಪಡೆದೆ. “ಯಾರನ್ನು ಕಾಣಬೇಕಾದರೂಎಂ.ಡಿ.ಯವರಿಗೆ ಬಿಡುವು ದೊರೆಯುವುದು ಸಂಜೆ ಕಳೆದ ಮೇಲೆಯೇ” ಎಂಬ ಮುನ್ಸೂಚನೆ ಕೊಟ್ಟಂತೆಅಂದಿನ ಸಂಜೆಗತ್ತಲಿಗೆ ಸಂಜೀವ ಕುಡ್ವರ ದರ್ಶನ ಲಭಿಸಿತು.
 
ಕೈಕುಲುಕಿ ನನ್ನ ಪರಿಚಯ ಮಾಡಿಸಿಕೊಂಡ ಕುಡ್ವರೊಡನೆ ನನ್ನ ಭೇಟಿಯ ಉದ್ದೇಶವನ್ನು ಹೇಳಿದ ಶೆಟ್ಟರು “ನಾನಿನ್ನು ಬರುತ್ತೇನೆ” ಎಂದು ನುಡಿದು ಹೊರಟುಹೋದ ಒಂದೆರಡು ನಿಮಿಷಗಳಲ್ಲೆ ನನ್ನ ಪರೀಕ್ಷಾ ಸಂದರ್ಶನ ಪ್ರಾರಂಭವಾಯಿತು.
 
ಬೆಂಗಳೂರಿನಲ್ಲಿ ಯಾವ ಪೇಪರಿನಲ್ಲಿ ಇದ್ದೀರಿ?” ಮೊದಲ ಪ್ರಶ್ನೆ.
 
 ಪ್ರವರ ಬಿಚ್ಚಿದೆಮುಗಿದ ಕೂಡಲೆ “ನನಗೆ ಅನುಭವಿ ಜನ ಬೇಕಿಲ್ಲವೆಂಬ ನಿರ್ದಾಕ್ಷಿಣ್ಯ ನುಡಿ ಇಂಗ್ಲಿಷ್ ನಲ್ಲಿ ಹೊರಬಿತ್ತುಆ ಮಾತಿನ ಆಘಾತದಿಂದ ಸಾವರಿಸಿಕೊಂಡು ಹೇಗೂ ಇದು ನಿರರ್ಥಕ ಯಾತ್ರೆಯಾಯಿತುಇನ್ನೇನು ಕೆಲಸವಿದೆ ಇಲ್ಲಿ?” ಎಂಬ ಹಾಗೆಕುಳಿತಿದ್ದ ಕುರ್ಚಿಯಿಂದ ಎದ್ದೆ.
 
ಸಿಟ್ ಡೌನ್” ಮರು ಆಜ್ಞೆ ಬಂತುಈಗಂತೂ ಈ ಕಚೇರಿಯಲ್ಲಿ ನಾನು ದ್ಯೋಗಾಪೇಕ್ಷಿಯಲ್ಲಒಬ್ಬ ಸಾಮಾನ್ಯ ಸಂದರ್ಶಕನಾಗಿ  ಕುಡ್ವರನ್ನು ಮಾತನಾಡಿಸುತ್ತಿದ್ದೇನೆ ಎಂಬ ಮನೋಭಾವ ಮೂಡಿತುಕುರ್ಚಿಯಲ್ಲಿ ಒರಗಿ ಕುಳಿತೆ,ಲೋಕಾಭಿರಾಮದ ಪ್ರಶ್ನೆಗಳು – ಇದ್ದಕ್ಕಿದ್ದ ಹಾಗೆ ವೃತ್ತಿಸಂಬಂಧದ ವೈಯಕ್ತಿಕ ಪ್ರಶ್ನೆಗಳು – ಒಂದರ ಹಿಂದೆ ಒಂದು ಬರತೊಡಗಿದವುನಿರ್ಭಿಡೆಯಿಂದ ಉತ್ತರ ಕೊಡುತ್ತಾ ಹೋದೆಒಟ್ಟೊಟ್ಟಿಗೇಮುಂದೊಡ್ಡಿದ್ದ ಡಬ್ಬದಿಂದ ಸಿಗರೇಟ್ ಗಳನ್ನು ಸಂಕೋಚವಿಲ್ಲದೆ ತೆಗೆದು ಉರಿಸಲೂ ತೊಡಗಿದೆ.
 
 ಪ್ರಶ್ನೋತ್ತರದ ಕಣ್ಣುಮುಚ್ಚಾಲೆ ಆಟದಲ್ಲಿ ಅರ್ಧಗಂಟೆ ಕಳೆದಾಗ “ಯೂ ಸೆಂಡ್ ಯುವರ್ ಅಪ್ಲಿಕೇಶನ್ಐ ವಿಲ್ ಲೆಟ್ ಯೂ ನೋ” ಎಂಬ ಎದೆ ಮಾಡುತಿರುಗಿಬರಲಿದ ಜಾಡುಮತ್ತೆ ಸ್ವಲ್ಪ ಹೊತ್ತು ಕಳೆದು, “ನೀನು ಕೆಲಸಕ್ಕೆ ಯಾವಾಗ ಬೇಕಾದರೂ ಸೇರಿಕೊಳ್ಳಬಹುದು“. ಎಂಬ ಸೂಚನೆಯ ಬೆನ್ನಿಗೇ ಹಳೆ ಮೈಸೂರು ಉತ್ತರ ಕರ್ನಾಟಕ ರಾಜಕೀಯದ ಮೇಲೆ ಪ್ರಶ್ನೋತ್ತರ 
 
ಸುಮಾರು ಎರಡೂವರೆ ಗಂಟೆಗಳನ್ನು ಕಬಳಿಸುವವರೆಗೂ ನಡೆಯಿತುಕೊನೆಗೆ (ಉಪಾಯವಿಲ್ಲದೆ), ಇನ್ನೂ ತಡವಾದರೆ ಹೋಟೆಲಿನಲ್ಲಿ ಊಟ ಸಿಗಲಾರದೆಂಬ ನೆಪವೊಡ್ಡಿ – ನೌಕರಿಯ ಅರ್ಜಿಯನ್ನು ಮರುದಿನ ಕಚೇರಿಯಲ್ಲಿ ಕೊಡುವ ಪ್ರಸ್ತಾಪವನ್ನೂ ಮರೆಯದೆ ಮಾಡಿ – ಹೊರಟು ಬಂದೆ.
 
ಮರುದಿನಸಿಬ್ಬಂದಿಯವರು ನನ್ನಿಂದ ಅರ್ಜಿ ಪಡೆದುಕೊಳ್ಳಲು ಮೊದಲಿಗೆ ನಿರಾಕರಿಸಿದರೂಹಿಂದಿನ ರಾತ್ರಿ ತಿಳಿದುಕೊಂಡಿದ್ದಮಾಲಿಕರ ಮರ್ಜಿಯ ಜಾಡನ್ನೇ ಅನುಸರಿಸಿಅರ್ಜಿಯನ್ನು ಸ್ವೀಕರಿಸಿ ‘ಸೂಕ್ತ ಸಮಯದಲ್ಲಿ ಎಂ.ಡಿ.ಯವರ ಮೇಜಿನ ಮೇಲೆ ಇಡಲು’ ಅವರನ್ನು ಹೇಗಾದರೂ ಒಪ್ಪಿಸಲು ಸಾಧ್ಯವಾಯಿತು.
 ಊರಿಗೆ ಮರಳಿ ಎಂಟು ದಿನ ಕಾದರೂನವಭಾರತದಿಂದ ಯಾವ ಪತ್ರವೂ ಬರಲಿಲ್ಲವಾಗಿತಂತ್ರವಿಧಾನದಲ್ಲಿ ಬದಲಾವಣೆ ಅಗತ್ಯವೆನಿಸಿತುಸಂಜೀವ ಕುಡ್ವರ ಚಟುವಟಿಕೆ ಚುರುಕಾಗುವುದು ಸಂಜೆಯ ಅನಂತರವೇ ರಾತ್ರಿ ಬಹು ಹೊತ್ತಿನವರೆಗೂ ಅವರು ನನ್ನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಲೇ ಇರುತ್ತಾರೆಂಬ ವಿಷಯ ಗೊತ್ತಾಗಿತ್ತುಪರವೂರ ದೂರವಾಣಿ ಕರೆಗಳನ್ನು ಅವರೇ ಸ್ವೀಕರಿಸುವರೆಂದೂ ತಿಳಿದಿತ್ತುಆದ್ದರಿಂದ 15ಮೈಲು ದೂರದ ಪುತ್ತೂರಿಗೆ ರಾತ್ರಿ ಬಂದು ಅಲ್ಲಿಂದ ನವಭಾರತದ ಏಕಮಾತ್ರ ಸಂಖ್ಯೆಗೆ ಟ್ರಂಕ್ ಕಾಲ್ ಮಾಡಿದೆ.
 
 “ಹಲೊ” – ಗುಹಾಂತರಾಳದ ಗಂಭೀರ ಧ್ವನಿಯ ಗುರುತಾಯಿತಾದರೂ “ರಘುವೀರ ಶೆಟ್ಟರೊಡನೆ ಮಾತನಾಡಬಹುದೇ ?”ಎಂದೆ. “ಅವರು ಈಗ ಇಲ್ಲಿ ಇಲ್ಲಏನು ವಿಷಯ ?” ನನ್ನ ಹೆಸರು ಹೇಳಿವಿಷಯ ತಿಳಿಸಿದಾಗ “ನೀವು ನಾಳೆಯೇ ಬರಬಹುದುಎಂಬ ಆದೇಶ (ಇಂಗ್ಲಿಷಿನಲ್ಲಿದೊರೆಯಿತುಆ ಕೂಡಲೇಮಾತು ಬದಲಾಯಿಸಿಅವರನ್ನು ಗುರುತಿಸದೆ ಇದ್ದುದಕ್ಕೆ ಕ್ಷಮೆ ಕೇಳಿದೆಮರುದಿನ ಹೇಳಿದ ಸಮಯಕ್ಕೆ ಸರಿಯಾಗಿ ಹೋಗಿ ನವಭಾರತ ಕಚೇರಿ ಕಡತಗಳಲ್ಲಿ ದಾಖಲಾತಿ ಮಾಡಿಸಿಕೊಂಡೆ.
 
 ಒಳಹೊಕ್ಕ ಒಂದೆರಡು ದಿನಗಳಲ್ಲೇ ದೊಡ್ಡ ( ವಿ.ಎಸ್.) ಕುಡ್ವರು ಪತ್ರಿಕೆಯ ಎಲ್ಲ ಕಾರ್ಯಭಾರವನ್ನೂ ದೊಡ್ಡ ಮಗ ಸಂಜೀವರಿಗೆ ವಹಿಸಿಕೊಟ್ಟು ಹೆಸರಿಗೆ ಮಾತ್ರ ಸಂಪಾದಕರಾಗಿ ಉಳಿದಿದ್ದಾರೆ – ಸಂಜೀವ ಕುಡ್ವರೇ ಸರ್ವನಿಯಂತ್ರಕರು ಎಂದು ತಿಳಿಯಿತುಮೊದಲಿನ ಎರಡು ವಾರಗಳಲ್ಲೆ ಸಂಪಾದಕೀಯ ಶಾಖೆಯ ಹಿರಿತಲೆಗಳು ನನಗೆ ಯಾವ ಕೆಲಸವನ್ನೂ ಏಕೆ ವಹಿಸಿಕೊಡುತ್ತಿಲ್ಲವೆಂಬ ಪ್ರಶ್ನೆ – ದಿನಕ್ಕೆ ಮೂರು ಬಾರಿಯಾದರೂ, ‘ಸಮಾಲೋಚನೆಯ’ ಹೆಸರಿನಲ್ಲಿ ತನ್ನ ಚೇಂಬರಿಗೆ ಕರೆಸಿ,ಪ್ರಶ್ನೋತ್ತರ ಅಧಿವೇಶನ ನಡೆಸುತ್ತಿದ್ದ ನಿಯಂತ್ರಕರ ಮಾತಿನಿಂದ ಪರಿಹಾರವಾಯಿತು.
 
ವರ್ಷದಲ್ಲಿ ಎರಡೋ ಮೂರೋ ವಿಶೇಷ ಪುರವಣಿಗಳನ್ನು ಅದುವರೆಗೆ ಪ್ರಕಟಿಸುತ್ತಿದ್ದ ಪರಿಪಾಠದಂತೆಆ ಸಂದರ್ಭದಲ್ಲಿ ದೀಪಾವಳಿ ಪುರವಣಿ ಸಿದ್ಧವಾಗುತ್ತಿತ್ತುಒಂದು ದಿನ ಎಸ್ಟಿಕೆಯವರೆದುರು ಕುಳಿತಿದ್ದಾಗಜಾಬ್ ವಿಭಾಗದವರೊಬ್ಬರು ಒಳಗೆ ಬಂದು “ಸಗ್ಳೆ ರೆಡಿ ಅಸಾ” ಎಂದರುತಕ್ಷಣ “ಯೂ ಗೋ ವಿದ್ ಹಿಮ್” ಅಜ್ಞೆ ಬಂತುಬಂದವರೊಡನೆ ವಿಭಾಗಕ್ಕೆ ಹೋದೆ.
 
ಯಾವ ಪೇಜು ಕಟ್ಟುವುದು ಈಗ ?” ಎಂದು ಬಂದ ಪ್ರಶ್ನೆಯಿಂದಾಗಿ ನನ್ನನ್ನು ಕಳುಹಿಸಿದ ಕಾರಣವನ್ನು ಅರ್ಥಮಾಡಿಕೊಂಡು,ಪುಟಗಳ ವಿನ್ಯಾಸಕ್ಕೆ ಅಗತ್ಯವಿರುವ ಮಾಹಿತಿ ಸಂಗ್ರಹಿಸತೊಡಗಿದೆಜೋಡಿಸಿಟ್ಟಿದ್ದ ಅಚ್ಚುಮೊಳೆ ಸಂಗ್ರಹ ಸುಮಾರು 40ಗ್ಯಾಲಿಗಳಷ್ಟಿತ್ತು ! “ಪ್ರೂಫ್ ಕೊಡ್ತೀರಾ ?” ಎಂದಾಗಪ್ರೂಫ್ ಯಾವುದೂ ಇಡ್ಲಿಲ್ಲ – ನಾವು ಹಾಗೇ ಅಂದಾಜಿಗೆ ಪೇಜಿಗೆ ಇಳಿಸುವುದುಎಂಬ ಉತ್ತರ. “ಇದು ಇರಬಹುದುಆದರೆ ನನಗೆ ಏನೆಲ್ಲಾ ಮ್ಯಾಟರ್ ಇದೆ ಅಂತ ಗೊತ್ತಾಗಬೇಕಾದರೆ ಒಂದೋ ಪ್ರೂಫ್ಇಲ್ಲವಾದರೆ ಒರಿಜಿನಲ್ ಆದರೂ ಬೇಕು” ಎಂದು ಪಟ್ಟು ಹಿಡಿದೆ. ‘ವಿಚಿತ್ರ ಪ್ರಾಣಿಯ ಬೇಡಿಕೆಎಂ.ಡಿ.ಯವರಲ್ಲಿಗೆ ರವಾನೆಯಾಯಿತುಅಲ್ಲಿಂದ ಬಂದ ಆದೇಶದಂತೆಸುಮಾರು ಒಂದು ಗಂಟೆಯಲ್ಲಿ 40ಗ್ಯಾಲಿಗಳ ಪ್ರೂಫ್ ಗಳೂ ನನ್ನ ಎದುರಿಗೆ ಬಂದುಬಿದ್ದವು.
 
(ಆಗ ಹುಟ್ಟಿಸಿದ್ದ ಕುತೂಹಲವನ್ನು ಉಳಿಸಿ – ಬೆಳೆಸಿಮುಂದಿನ ತೊಂಭತ್ತು ನಿಮಿಷಗಳಲ್ಲಿ ನಾಲ್ಕೂ ಪುಟಗಳನ್ನು ‘ಕಟ್ಟಿಸಿಮುಗಿಸಿ, “ಬನ್ನಿಊಟ ಮಾಡಿ ಬರುವ” ಎಂಬ ಮೆಚ್ಚುಗೆಯ ಆಹ್ವಾನವನ್ನು (ಆಮೇಲೆಜಾಬ್ ವಿಭಾಗದಿಂದಲೇ ಪಡೆದೆನೆಂಬುದು ಬೇರೆ ಮಾತು.)
 
 
(ಮುಂದಿನ ಭಾಗದಲ್ಲಿ)

(ಇದು ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರು ಬರೆದು, ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ.)

 

for more info about padyana gopalakrishna click this link:

ವಿಶೇಷ ಸೃಷ್ಟಿಗಳ ಲೋಕದಲ್ಲಿ–ಅಂಕಣ15: ‘ಬ್ಯಾಂಗಳೂರ್ ! ಬಾಯ್ ಬಾಯ್ ಟು ಯೂ’

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ16: ಪ್ರೂಫ್, ಇಲ್ಲವಾದರೆ ಒರಿಜಿನಲ್ ಆದರೂ ಬೇಕು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*