
ಶ್ರೀ ರಾಮ ವಿದ್ಯಾಕೇಂದ್ರದ ಪದವಿ ವಿಭಾಗದ ವಿದ್ಯಾರ್ಥಿಗಳು ಕುಣಿತ ಭಜನೆ ನಡೆಸಿ ಕೊಟ್ಟರು PRAKASH BORKAR CLICK


kishore peraje click
ಕಲ್ಲಡ್ಕದಲ್ಲಿರುವ ಶ್ರೀರಾಮ ಭಜನಾ ಮಂದಿರ ಆಶ್ರಯದಲ್ಲಿ ಮಂಗಳವಾರ 85ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು.

KISHORE PERAJE CLICK ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಶ್ರೀರಾಮ ಭಜನಾಮಂದಿರ ದ ಆಶ್ರಯದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಕಲ್ಲಡ್ಕದ ಶಿಲ್ಪಾಗೊಂಬೆ ಬಳಗ ಪ್ರದರ್ಶಿಸಿದ ನಾಗಸಾಧುಗಳ ಕಲಾಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭ ನಾನಾ ರೀತಿಯ ವೇಷಗಳು, ಬ್ಯಾಂಡ್ ಸೆಟ್ ಗಳು, ಟ್ಯಾಬ್ಲೋಗಳು ಗಮನ ಸೆಳೆದವು. ಶ್ರೀಕೃಷ್ಣ ದೇವರ ಶೋಭಾಯಾತ್ರೆ ಕರಿಂಗಾಣ ಕ್ರಾಸ್ ರಸ್ತೆವರೆಗೆ ತೆರಳಿ ಬಳಿಕ ಶ್ರೀರಾಮ ಮಂದಿರಕ್ಕೆ ಆಗಮಿಸಿತು. ನೇತು ಹಾಕಲಾಗಿದ್ದ ಮಡಕೆಗಳನ್ನು ಯುವಕರ ತಂಡ ಒಡೆಯುತ್ತಿದ್ದ ದೃಶ್ಯ ನೋಡಲು ನೂರಾರು ಜನರು ಸೇರಿದ್ದರು.

PRAKASH BORKAR CLICK
ಮೆರವಣಿಗೆಯಲ್ಲಿ ಆರೆಸ್ಸೆಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಪ್ರಮುಖರಾದ ವಜ್ರ ಕಲ್ಲಡ್ಕ, ಯತೀನ್ ಕುಮಾರ್, ದಿನೇಶ್ ಅಮ್ಟೂರು ಸಹಿತ ಪ್ರಮುಖರು ಭಾಗವಹಿಸಿದ್ದರು.

PRAKASH BORKAR CLICK


Be the first to comment on "ಕಲ್ಲಡ್ಕ: 85ನೇ ವರ್ಷದ ಮೊಸರು ಕುಡಿಕೆ ಉತ್ಸವ"