ಬಸ್ ಚಲಾಯಿಸುವಾಗ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ರಸ್ತೆಗೆ ಎಸೆಯಲ್ಪಟ್ಟ ಪ್ರಯಾಣಿಕ ಕರ್ನಾಟಕ ರಬ್ಬರ್ ಅಭಿವೃದ್ಧಿ ನಿಗಮದಲ್ಲಿ ಸಿಬ್ಬಂದಿಯಾಗಿರುವ ಕೊಳ್ನಾಡು ನಿವಾಸಿ ಬಾಲರಾಮ ಬಲ್ಲಾಳ್ (50) ಗಾಯಗೊಂಡಿದ್ದಾರೆ.
ವಿಟ್ಲ ಸಾಲೆತ್ತೂರು ರಸ್ತೆಯ ಕುಡ್ತಮುಗೇರು ಎಂಬಲ್ಲಿ ಘಟನೆ ನಡೆದಿದೆ.ವಿಟ್ಲದಿಂದ ಕೊಳ್ನಾಡು ಕಡೆಗೆ ಹೋಗುತ್ತಿದ್ದ ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭ ಬಸ್ ಚಾಲಕ ಯಾವುದೇ ಸೂಚನೆ ಇಲ್ಲದೆ ಬ್ರೇಕ್ ಹಾಕಿದ್ದಾರೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಬಲರಾಮ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ಬಲರಾಮ ಬಲ್ಲಾಲರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಸಿದ್ದರೂ, ಬಳಿಕ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ಚಿಕಿತ್ಸೆಯ ಅಗತ್ಯವಿದ್ದ ಕಾರಣ ಅವರನ್ನು ಮತ್ತೆ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.
Be the first to comment on "ಏಕಾಏಕಿ ಬ್ರೇಕ್, ರಸ್ತೆಗೆ ಎಸೆಯಲ್ಪಟ್ಟ ಪ್ರಯಾಣಿಕ"