ಕೆಲವರು ಪ್ರತಿಭಟನೆ ಮಾಡ್ತಾರೆ, ಕೆಲವರು ಸಂಭ್ರಮಾಚರಣೆ ಮಾಡ್ತಾರೆ. ಆದರೆ ಕಾರಣ ಬೇರೆ ಬೇರೆ. ಇದನ್ನು ಜನರೂ ಆಕ್ಷೇಪಿಸುವುದಿಲ್ಲ. ಅದು ಅವರವರ ಸ್ವಾತಂತ್ರ್ಯ. ಆದರೆ ಜನಸಾಮಾನ್ಯರು ನಡೆದುಕೊಂಡು ಹೋಗುವ, ಹಾಗೂ ಸಾವಿರಾರು ಮಂದಿ ಓಡಾಟ ನಡೆಸುವ ಬಿ.ಸಿ.ರೋಡಿನ ಹೃದಯಭಾಗದ ರಸ್ತೆಯನ್ನೇ ಭಾಗ ಮಾಡುತ್ತಿದ್ದಾರಲ್ವ, ಯಾವ ರಾಜಕೀಯ ಪಕ್ಷದವರಿಗೂ ಇದು ಕಣ್ಣಿಗೆ ಕಾಣಿಸೋದಿಲ್ವೇ ಎಂಬ ಸಹಜ ಅನುಮಾನ ಸಾರ್ವಜನಿಕರಿಗೆ ಕಾಡತೊಡಗಿದೆ. ಗುರುವಾರ ರಸ್ತೆಯನ್ನು ಮತ್ತಷ್ಟು ಭಾಗ ಮಾಡಲು ಹೋಗಿ ಆದ ಆಧ್ವಾನದಿಂದ ಸಾರ್ವಜನಿಕರಿಗೆ ಮತ್ತಷ್ಟು ಅನಾಥಪ್ರಜ್ಞೆ ಕಾಡತೊಡಗಿದೆ.
ಕಳೆದ ಕೆಲ ದಿನಗಳ ಹಿಂದೆ ಬಿ.ಸಿ.ರೋಡಿನ ಹೃದಯಭಾಗದಲ್ಲೇ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಾಗಿ ಅರ್ಧ ಭಾಗ ಮಾಡಲಾಯಿತು. ಇದು ಸಾರ್ವತ್ರಿಕ ಟೀಕೆಗೆ ಕಾರಣವಾಯಿತು. ಆದರೆ ಯಾರು ಯಾರಿಗೆ ಏನು ಹೇಳಿದರೋ ಜನರಿಗೆ ಗೊತ್ತೇ ಆಗಲಿಲ್ಲ. ಹೀಗಾಗಿ ಏನು ಮಾಡಿದರೂ ನಡೆಯುತ್ತೆ ಎಂಬ ಧೈರ್ಯದಿಂದ ಮತ್ತೊಂದು ಭಾಗವನ್ನು ಮಾಡಲು ಹೊರಡಲಾಗಿದೆ. ಮೊದಲು ಹೊಂಡ ತೆಗೆದ ಜಾಗದಲ್ಲಿ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಬೆಳ್ಳಂಬೆಳಗ್ಗೆಯೇ ವಾಹನಗಳು ಹೂತುಹೋಗಲು ಆರಂಭಿಸಿದವು.
ಗುರುವಾರ ಬೆಳಗ್ಗೆ ಒಂದು ಲಾರಿ, ಮತ್ತೊಂದು ಕಾರು ಹೀಗೆ ವಾಹನಗಳು ಬಿ.ಸಿ.ರೋಡ್ ಪ್ರವೇಶಿಸುತ್ತಿದ್ದಂತೆ ಮಣ್ಣಿನಲ್ಲಿ ಹೂತುಹೋಗಲು ಶುರುಮಾಡಿದವು. ಧಾರಾಕಾರ ಮಳೆ ಇಲ್ಲದ ಕಾರಣ ಮತ್ತಷ್ಟು ಅನಾಹುತವಾಗಲಿಲ್ಲ. ಆದರೆ ಆ ಸಾಧ್ಯತೆಯೂ ಇಲ್ಲದಿಲ್ಲ.
PICTURE : SADASHIVA KAIKAMBA
ಇಂಥದ್ದೊಂದು ಸಂಭವಿಸುತ್ತದೆ ಎಂಬ ಅಪಾಯದ ಮುನ್ನೆಚ್ಚರಿಕೆಯನ್ನು ಬಂಟ್ವಾಳನ್ಯೂಸ್ ಈ ಹಿಂದೆಯೇ ನೀಡಿತ್ತು.
ಆ ವರದಿಗೆ ಇಲ್ಲಿ ಕ್ಲಿಕ್ ಮಾಡಿರಿ.
Be the first to comment on "ಹೇಳುವವರಿಲ್ಲ, ಕೇಳುವವರಿಲ್ಲ – ಬಿ.ಸಿ.ರೋಡ್ ರಸ್ತೆ ಮಧ್ಯೆ ಗಂಡಾಂತರ!!"