ದ.ಕ. ಜಿಲ್ಲೆಯ ಮೂಡಬಿದ್ರೆಯವಿದ್ಯಾರ್ಥಿನಿ 15ರ ಹರೆಯದ ರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯ ಸಾವಿಗೀಡಾಗಿರುವುದು ಹಲವಾರು ರೀತಿಯ ಸಂಶಯವನ್ನು ಹುಟ್ಟು ಹಾಕಿದೆ ಎಂದು ಬಂಟ್ವಾಳ ಯುವವಾಹಿನಿ ಹೇಳಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿ ಬಂಟ್ವಾಳ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗಿದೆ.
ಸೋಮವಾರ ಸುಮಾರು 75ಕ್ಕೂ ಅಧಿಕ ಯುವವಾಹಿನಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಆಗಮಿಸಿ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ಸೂಕ್ತವಾದ ರೀತಿಯಲ್ಲಿ ತನಿಖೆಯಾಗಬೇಕು ಹಾಗೂ ವಿದ್ಯಾರ್ಥಿಯ ಹೆತ್ತವರಿಗೆ ನ್ಯಾಯ ಒದಗಬೇಕು. ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಹೋರಾಟ ಹಮ್ಮಿಕೊಳ್ಳಲಾಗುವುದು ಅನಿವಾರ್‍ಯವಾಗುತ್ತದೆ ಎಂಬ ಮನವಿ ಪತ್ರವನ್ನು ಬಂಟ್ವಾಳ ತಾಲೂಕಿನ ತಹಶೀಲ್ದಾರರ ಮೂಲಕ ದ.ಕ. ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಯಿತು.
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ ಸುವರ್ಣ ಅಲೆತ್ತೂರು, ಕಾರ್‍ಯದರ್ಶಿ ದಿನೇಶ್ ಸುವರ್ಣ ರಾಯಿ, ಕೋಶಾಧಿಕಾರಿ ಲೋಕೇಶ್ ಪೂಜಾರಿ ಪಿ.ಜೆ., ಸಲಹೆಗಾರರಾದ ಬಿ, ತಮ್ಮಯ, ಮಾಜಿ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ಬಿ. ಶ್ರೀಧರ್ ಅಮೀನ್, ರಾಜೇಶ್ ಸುವರ್ಣ, ರಾಮಚಂದ್ರ ಸುವರ್ಣ, ಪ್ರೇಮನಾಥ ಕೆ., ಬಿಲ್ಲವ ಮುಖಂಡರಾದ ಬಿ. ವಿಶ್ವನಾಥ, ನೋಣಯ್ಯ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಸಾಮಾಜಿಕ ಕಾರ್ಯಕರ್ತರಾದ ಪ್ರಭಾಕರ ದೈವಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಕಾವ್ಯಾ ಸಾವು, ಸೂಕ್ತ ತನಿಖೆಗೆ ಯುವವಾಹಿನಿ ಮನವಿ"