ಅಸಂಘಟಿತ ಕಾರ್ಮಿಕ ಮುಕ್ತ ಭಾರತ ನಿರ್ಮಾಣ ಮಾಡುವತ್ತ ಪ್ರತಿಯೊಬ್ಬರು ಚಿಂತನೆ ನಡೆಸಬೇಕೆಂದು ಕಾರ್ಮಿಕ ಪ್ರಾದೇಶಿಕ ನಿರ್ದೇಶನಾಲಯ ದ ಕಾರ್ಮಿಕ ಶಿಕ್ಷಣಾಧಿಕಾರಿ ಸತೀಶ್ ಕುಮಾರ್ ಅವರು ಹೇಳಿದರು.
ಭಾರತದ ಸರಕಾರದ ದತ್ತೋ ಪಂತ್ ಥೇಂಗಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವತಿಯಿಂದ ಕೇಪು ಗ್ರಾ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ 2 ದಿನಗಳ ಅಸಂಘಟಿತ ಕಾರ್ಮಿಕ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಅಸಂಘಟಿತ ಕಾರ್ಮಿಕ ಕುಟುಂಬ ಇಂದು ದೇಶದ ಮುಖ್ಯ ವಾಹಿನಿಗೆ ಬರಬೇಕೆಂದು ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷ ತಾರಾನಾಥ ಆಳ್ವ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಗ್ರಾ.ಪಂ. ಸದಸ್ಯೆ ಮಾಲತಿ, ಪಿಡಿಓ ನಳಿನಿ ಉಪಸ್ಥಿತರಿದ್ದರು.
ಶಿಕ್ಷಕಿ ಲಕ್ಷ್ಮೀ ಸ್ವಾಗತಿಸಿ, ಮೇಲ್ವಿಚಾರಕಿ ಲೋಲಾಕ್ಷಿ ವಂದಿಸಿದರು.
ಸಂವಾದ ಕಾರ್ಯ ಕ್ರಮ: ಪರಿಶಿಷ್ಟ ಪಂಗಡದ ಅಸಂಘಟಿತ ಕಾರ್ಮಿಕರಿಗೆ ನಡೆದ ಸಂವಾದ ಕಾರ್ಯಕ್ರಮ ವನ್ನು ವಿಟ್ಲ ಶಿಶು ಯೋಜನೆ ಅಧಿಕಾರಿ ಸುಧಾ ಜೋಶಿ, ಕಲಾವಿದ ಮಂಜುವಿಟ್ಲ ನಡೆಸಿದರು.
Be the first to comment on "ಅಸಂಘಟಿತ ಕಾರ್ಮಿಕರ ಕಾರ್ಯಾಗಾರ"