ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಬೃಹತ್ ದೇವದಾರು ಮರವೊಂದು ರಸ್ತೆಗುರುಳಿ ಆತಂಕ ಸೃಷ್ಟಿಸಿದರೂ ಸಾರ್ವಜನಿಕರ ಸಹಕಾರದಿಂದ ಅದನ್ನು ತೆರವುಗೊಳಿಸಲಾಯಿತು.
ನಿನ್ನೆ ರಾತ್ರಿ 3 ಗಂಟೆಯ ಸಮಯದಲ್ಲಿ ಮಾರ್ನಬೈಲು ನಿಂದ ಕಬಕ ಸಂಪರ್ಕಿಸುವ ರಾಜ್ಯ ಹೆದ್ದಾರಿ 18 ರ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ರಸ್ತಗೆ ಅಡ್ಡಲಾಗಿ ಉರುಳಿ ಬಿದ್ದ ಬೃಹತ್ ಪ್ರಮಾಣದ ದೇವಾದರ್ ಮರದಿಂದಾಗಿ ವಿದ್ಯುತ್ ತಂತಿಗಳಿಗೆ ಹಾನಿ ಉಂಟಾಗಿ,ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಕೂಡಲೇ ಪಿಡಬ್ಯೂಡಿ,ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ವಿಷಯ ತರಲಾಯಿತು.ಇದೇ ಸಂದರ್ಭ ಕರೈ ಕೊಳ್ನಾಡಿನ ಸ್ಥಳೀಯ ಹೆಲ್ಪಿಂಗ್ ಹ್ಯಾಂಡ್ಸ್ (ರಿ) ಟ್ರಸ್ಟ್ ಸದಸ್ಯರು ಸತತ ಮೂರು ಗಂಟೆಗಳ ಕಾಲ ಮೂರು ಮಿಷನ್ ಗಳನ್ನು ಉಪಯೋಗಿಸಿ, ಮರವನ್ನು ತುಂಡರಿಸಲು ಸಹಕರಿಸಿದರು. ಬೆಳಗ್ಗೆ 8 ಗಂಟೆ ವೇಳೆಗೆ ಸಂಪೂರ್ಣ ರಸ್ತೆ ಸಂಚಾರಕ್ಕೆ ಮುಕ್ತವಾಯಿತು. ಘಟನಾ ಸ್ಥಳದಲ್ಲಿ ನಿಂತ ಟ್ರಸ್ಟ್ ಸದಸ್ಯರು ಆಗಮಿಸುತ್ತಿದ್ದ ವಾಹನಗಳಿಗೆ ಬದಲಿ ಸಂಚಾರ ವ್ಯವಸ್ಥೆಯನ್ನೂ ಕಲ್ಪಿಸಿದರು. ಟ್ರಸ್ಟ್ ಸ್ಥಾಪಕಾಧ್ಯಕ್ಷ ಎಚ್,ಎಂ ಖಾಲೀದ್ ಕೊಳ್ನಾಡು,ಅರೀಪ್ ಕರೈ , ಪದಾಧಿಕಾರಿಗಳು ಮತ್ತು ಊರಿನ ಹಿರಿಯರು ಉಪಸ್ಥಿತರಿದ್ದರು. ಮೆಸ್ಕಾಂ ಸಿಬ್ಬಂದಿ ಚಂದ್ರಶೇಖರ ಕಾಡುಮಠ ಸಹಕರಿಸಿದರು.
Be the first to comment on "ರಸ್ತೆಗುರುಳಿದ ದೊಡ್ಡ ಮರ, ಸ್ಥಳೀಯರ ನೆರವಿನಿಂದ ತೆರವು"