ಮುಂಜಾಗರೂಕತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗೆ (ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಸಂಬಂಧಿಸಿದಂತೆ ಬಂಟ್ವಾಳ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಾದ್ಯಂತ ಜುಲೈ 4 ರ ಮಧ್ಯರಾತ್ರಿ 12 ಗಂಟೆಯಿಂದ ಜುಲೈ 11 ರ ಮಧ್ಯರಾತ್ರಿ 12 ಗಂಟೆಯವರೆಗೆ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆಯನ್ನು ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ.
ಜುಲೈ 11ರವರೆಗೂ ನಿಷೇಧಾಜ್ಞೆ ಮುಂದುವರಿದರೆ, ಬಂಟ್ವಾಳ ತಾಲೂಕಿನಲ್ಲಿ ನಿಷೇಧಾಜ್ಞೆ ವಿಧಿಸಿ 46 ದಿನಗಳು ತುಂಬಿಹೋಗುತ್ತವೆ.
ಮೇ.26ರಂದು ಕಲ್ಲಡ್ಕದಲ್ಲಿ ನಡೆದ ಅಹಿತಕರ ಘಟನೆ ಬಳಿಕ ಮೇ.27ರಂದು ತಾಲೂಕಿನಾದ್ಯಂತ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಇದೀಗ ವಾತಾವರಣ ತಿಳಿಯಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದೇ ಇದ್ದರೂ ನಿಷೇಧಾಜ್ಞೆ ಮುಂದುವರಿಸಲಾಗಿದೆ.
ಮೇ 27ರಿಂದ ಜೂನ್ 2, ಜೂನ್ 3ರಿಂದ ಜೂನ್ 9, ಜೂನ್ 10ರಿಂದ ಜೂನ್ 16, ಜೂನ್ 17ರಿಂದ ಜೂನ್ 23, ಜೂನ್ 23ರಿಂದ ಜೂನ್ 29ವರೆಗೆ ನಿಷೇಧಾಜ್ಞೆ ವಿಧಿಸಲಾಯಿತು. ಬಳಿಕ ಜುಲೈ 4ವರೆಗೆ ವಿಸ್ತರಣೆಗೊಂಡ ನಿಷೇಧಾಜ್ಞೆಯನ್ನೀಗ 7ನೇ ಬಾರಿ ವಿಸ್ತರಿಸಿದಂತಾಗಿದೆ.
Be the first to comment on "ನಿಷೇಧಾಜ್ಞೆ ಜುಲೈ 11ರವರೆಗೆ ವಿಸ್ತರಣೆ"