ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ತನ್ನ ಬಗ್ಗೆ ಬಂಟ್ವಾಳ ಕ್ಷೇತ್ರದ ಜನರಲ್ಲಿ ಅಪನಂಬಿಕೆ ಮತ್ತು ದ್ವೇಷ ಹುಟ್ಟಿಸುವ ದೃಷ್ಟಿಯಿಂದ ವಾಟ್ಸಾಪ್ ಮೂಲಕ ಸಂದೇಶಗಳನ್ನು ರವಾನಿಸಲಾಗುತ್ತಿದೆ ಎಂದು ಪ್ರಗತಿಪರ ಕೃಷಿಕ, ಬಿಜೆಪಿ ನಾಯಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಆರೋಪಿಸಿದ್ದಾರೆ. ಈ ಕುರಿತು ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.
ವಾಟ್ಸಾಪ್ ಗುಂಪೊಂದರಲ್ಲಿ ಈ ರೀತಿಯ ಸಂದೇಶ ಹಾಕಲಾಗಿದೆ. ಇದಾದ ಬಳಿಕ ತನಗೆ ನೂರಾರು ಜನರು ಪ್ರತಿಕ್ರಿಯೆ ಕೇಳಿದ್ದು, ಮಾನಸಿಕ ಕಿರುಕುಳವಾಗಿದೆ. ಅನಾವಶ್ಯಕವಾಗಿ ತನ್ನ ಹೆಸರನ್ನು ಎಳೆದುತಂದು ಗೌರವಕ್ಕೆ ಧಕ್ಕೆ ಉಂಟುಮಾಡಲಾಗಿದೆ ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಅವರು ವಾಟ್ಸಾಪ್ ಗುಂಪು ಮತ್ತು ದೂರವಾಣಿ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.
Be the first to comment on "ಸಾಮಾಜಿಕ ಜಾಲತಾಣ ದುರ್ಬಳಕೆ: ರಾಜೇಶ್ ನಾಯ್ಕ್ ದೂರು"