ಕಲ್ಲಡ್ಕದಲ್ಲಿ ಮೇ.26 ಮತ್ತು ಜೂನ್.13ರಂದು ನಡೆದ ಅಹಿತಕರ ಘಟನೆ ತನಿಖೆ ಸಂದರ್ಭ ಪೊಲೀಸ್ ಇಲಾಖೆ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ಸರಕಾರ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ನ್ಯಾಯೋಚಿತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಬಂಟ್ವಾಳ ಘಟಕ ಒತ್ತಾಯಿಸಿದೆ.
ಶನಿವಾರ ಬಿ.ಸಿ.ರೋಡಿನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಾಹುಲ್ ಹಮೀದ್, ಕಲ್ಲಡ್ಕ ಘಟನೆ ಪೂರ್ವಯೋಜಿತ ಎಂದು ಆಪಾದಿಸಿ ಪೊಲೀಸ್ ಕಾರ್ಯವೈಖರಿಯನ್ನು ಟೀಕಿಸಿ, ಉಸ್ತುವಾರಿ ಸಚಿವರು ಈ ಕುರಿತು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು. ಎಸ್.ಡಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಪುರಸಭಾ ಸದಸ್ಯರಾದ ಮಹಮ್ಮದ್ ಇಕ್ಬಾಲ್ ಐಎಂಆರ್ ಮತ್ತು ಮೊನೀಶ್ ಆಲಿ, ಎಸ್‌ಡಿಪಿಐ ಪುರಸಭಾ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಸಜಿಪಮೂಡ ಗ್ರಾಪಂ ಅಧ್ಯಕ್ಷ ನಾಸೀರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment on "ಕಲ್ಲಡ್ಕ ಘಟನೆ: ನ್ಯಾಯೋಚಿತ ತನಿಖೆ ನಡೆಸಲು ಎಸ್.ಡಿ.ಪಿ.ಐ. ಒತ್ತಾಯ"