ಆಯುಷಷ್ ಮಂತ್ರಾಲಯ, ಭಾರತ ಸರಕಾರ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆ ಹಾಗೂ ಶಾಂತಿವನ ಟ್ರಸ್ಟ್ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನರಿಕೊಂಬು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಯೋಗ ಶಿಬಿರ ಮಹಿಳೆಯರಿಗಾಗಿ ಆರಂಭಗೊಂಡಿದೆ.
ಡಾ.ರಘುವೀರ ಅವಧಾನಿ ಉದ್ಘಾಟಿಸಿದರು. ಗ್ರಾಪಂ ಸದಸ್ಯ ದಿವಾಕರ ಭಂಡಾರಿ, ಸುರೇಶ್, ಶಿಬಿರ ನಿರ್ವಾಹಕಿ ಶ್ರೀನಿಧಿ, ಸಿಡಿಪಿಒ ಸುಧಾ ಜೋಷಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾಪ್ರತಿನಿಧಿ ಸೌಮ್ಯಾ ಉಪಸ್ಥಿತರಿದ್ದರು. ಸಂಯೋಜಕ ಡಾ. ಸುಬ್ರಹ್ಮಣ್ಯ ಟಿ. ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾ ಪ್ರಾರ್ಥಿಸಿದರು. ಸಂಜೆ 5ರಿಂದ 6 ಗಂಟೆವರೆಗೆ ಪತಂಜಲಿ ಯೋಗ ಪ್ರತಿಷ್ಠಾನ ಮಂಗಳೂರಿನ ನರಿಕೊಂಬು ಶಾಖೆ ವತಿಯಿಂದ ನಡೆಯುವ ಶಿಬಿರವು 15 ದಿನ ನಡೆಯಲಿದೆ.
Be the first to comment on "ನರಿಕೊಂಬಿನಲ್ಲಿ ಮಹಿಳೆಯರಿಗೆ ಉಚಿತ ಯೋಗ ಶಿಬಿರ"