ಮಾಣಿ, ಪೆರಾಜೆಯ ಶ್ರೀ ರಾಮಚಂದ್ರಾಪಪುರ ಮಠದಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ನಡೆಯುತ್ತಿರುವ ತರಗತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಏಳು ವರ್ಷದ ಕೃಷ್ಣಯಜುರ್ವೇದ,ಬೌಧಾಯನೀಯ ವೇಂಕಟೇಶೀಯ ಪೂರ್ವ,ಮಧ್ಯಮ,ಅಪರ ಸಂಪುಟ ಪ್ರಯೋಗ ಸಹಿತ ಸಂಸ್ಕೃತ,ಜ್ಯೋತಿಷ್ಯ ತರಗತಿಗಳು ಇವು.
ಹದಿನಾರು ವರ್ಷ ಮೀರದ ಉಪನೀತರಾದ ಹವ್ಯಕ ವಟುಗಳಾಗಿರಬೇಕು, ಕೃಷ್ಣಯಜುರ್ವೇದ(ಪ್ರಯೋಗ ಸಹಿತ)ಸಂಸ್ಕೃತ,ಜ್ಯೋತಿಷ್ಯ ತರಗತಿಯೊಂದಿಗೆ ಯೋಗಾಭ್ಯಾಸ ಕಲಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ,ವಸತಿ ವ್ಯವಸ್ಥೆ, ಕರ್ನಾಟಕ ಸರ್ಕಾರದ ವ್ಯವಸ್ಥೆಯ ಮಾನ್ಯತೆ ಪಡೆದ ಪರೀಕ್ಷೆ ಹಾಗೂ ಸಂಸ್ಕೃತ ಪರೀಕ್ಷೆಗೆ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುವುದು. ವೇದಪಾಠಶಾಲೆಗೆ ಅರ್ಜಿ ಸಲ್ಲಿಸಲು ಕೊನೇ ದಿನಾಂಕ ಮೇ.೨೫ ವಿವರಗಳಿಗೆ ಶ್ರೀಮಠದ ಕಾರ್ಯಾಲಯ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Be the first to comment on "ಮಾಣಿ ಮಠದಲ್ಲಿ ತರಗತಿಗೆ ಆಹ್ವಾನ"