ಪ್ರಕೃತಿ ಆರಾಧಕರಾದ ತುಳುವರ ಮೇಲೆ ವಿದೇಶಿಯರ ಪ್ರಭಾವ

ಬಿ.ತಮ್ಮಯ್ಯ

ಅಂಕಣ: ನಮ್ಮ ಭಾಷೆ

ತುಳುವರು ಪ್ರಕೃತಿ ಆರಾಧಕರು ಎನ್ನುವುದಕ್ಕೆ ನಾಗಾರಾಧನೆ, ಭೂತಾರಾಧನೆಗಳಲ್ಲಿ ಬೇಕಾದಷ್ಟು ನಿದರ್ಶನಗಳು ಸಿಗುತ್ತವೆ. ಕಾಡನ್ನು ಉಳಿಸುವ ಸಲುವಾಗಿ ನಾಗದೇವರನ್ನು ಸ್ಥಾಪಿಸಿ, ನಾಗಬನಗಳನ್ನು ಸೃಷ್ಟಿ ಮಾಡಿ, ಕಾಡಿನ ರಕ್ಷಣೆ ಮಾಡಿದ್ದಾರೆ. ಭೂತಾರಾಧನೆಯಲ್ಲಿ ಪಂಜುರ್ಲಿ, ಪಿಲಿಚಾಮುಂಡಿ, ಮೈಸಂದಾಯ ಮೊದಲಾದ ಭೂತಗಳು ಪ್ರಾಣಿ ಸಂಬಂಧಿ ಭೂತಗಳಾಗಿವೆ.

ಹಂದಿಗಳ ಉಪಟಳವಾದರೆ ಪಂಜುರ್ಲಿಗೆ, ಹುಲಿಗಳ ಉಪಟಳವಾದರೆ ಪಿಲಿಚಾಮುಂಡಿಗೆ, ಕಾಡುಕೋಣಗಳ ಉಪದ್ರವವಾದರೆ ಮೈಸಂದಾಯ ನಿಗೆ ಹೀಗೆ ಹರಕೆ ಹಹೇಳುವ ಕ್ರಮವಿತ್ತು. ಆದರೆ ತುಳುವರು ಬೇಟೆಯಾಡುತ್ತಿದ್ದು ಕೆಡ್ಡೆಎಸದ ದಿನ ಬೇಡೆಯಾಡಬೇಕು ಎಂಬ ನಿಯಮವೂ ಇದೆ. ತುಳುವರು ಮಾಂಸಾಹಾರಿಗಳು, ಪ್ರಾಣಿಗಳನ್ನು ಬೇಟೆಯಾಡುತ್ತಿದ್ದುದು ಸೀಮಿತವಾಗಿತ್ತು.

ಪ್ರಾಣಿಗಳನ್ನು ಕೃಷಿ ಪ್ರದೇಶದಿಂದದೂರವಿರಿಸಲು  ಬೇಟೆಯಾಡುವ ಕ್ರಮವಿತ್ತು. ಬಿಲ್ಲು ಬಾಣಗಳಿಂದ ಕರ್ಪು ಎಂಬ ಬಾವಿಗಳಲ್ಲಿ ಪ್ರಾಣಿಗಳನ್ನು ಬೀಳಿಸಿ ಹಿಡಿದು ಮಾಂಸ ಮಾಡುತ್ತಿದ್ದರು. ಹುಲಿ ಮತ್ತು ಸಿಂಹಗಳನ್ನು ಬೇಟೆಯಾಡುತ್ತಿರಲಿಲ್ಲ. ಅವುಗಳನ್ನು ಹೆದರಿಸಿ ಮನುಷ್ಯರ ವಾಸಸ್ಥಳದಿಂದ ದೂರ  ಓಡಿಸುತ್ತಿದ್ದರು. ಬಿ.ಸಿ.ರೋಡ್ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದಲ್ಲಿ ಹುಲಿ ಓಡಿಸುವ ಸಾಧನ ಇದೆ. ಹಾಗೆ ಗದ್ದೆಗೆ ಬಂದಾಗ ನೀರನ್ನು ಬೀಳುವಲ್ಲಿ ಬಿದಿರಿನ ತುಂಡಿನಿಂದ ತಯಾರಿಸಿ ನೀರು ಬೀಳುವಲ್ಲಿ ಇಟ್ಟು ನೀರು ತುಂಬಿದಾಗ ಅದು ಕೆಳಗೆ ಹೋಗಿ ನೀರು ಖಾಲಿಯಾಗಿ ಮತ್ತೆ ಮೇಲೆ ಬಂದಾಗ ಇನ್ನೊಂದು ತುದಿ ಕಲ್ಲಿಗೆ ಬಡಿದು ಶಬ್ದ ಮಾಡುವ ಉಪಕರಣ ಹಳ್ಳಿಗಳಲ್ಲಿ ಕಾಣಬಹುದು. ಹುಲಿಬೇಟೆ ಪ್ರಾರಂಭವಾದದ್ದು ಭಾರತಕ್ಕೆ ಬ್ರಿಟಿಷರು ಬಂದ ಮೇಲೆ. ಅವರು ಮಾಂಸ ಹಾಗೂ ಹವ್ಯಾಸವಾಗಿ ಬೇಟೆಯಾಡುವುದನ್ನು ಪ್ರಾರಂಭಿಸಿದರು. ಅನೇಕ ಕಾಡಿನ ಮಧ್ಯೆ  ಬೇಟೆಗಾಗಿಯೇ ಅವರು ನಿರ್ಮಿಸಿದ ಬಂಗಲೆಗಳು ಇವೆ.

ತುಳುನಾಡಿನ ಹುಲಿವೇಷದಲ್ಲಿ ಬ್ರಿಟಿಷರ ವೇಷ ಹಾಕಿ, ಕೋವಿ ಹಿಡಿದು ಹುಲಿಗಳತ್ತ ಗುರಿ ಇಡುವವನನ್ನು ಕಾಣಬಹುದು. ಹೀಗೆ ಭಾರತದ ಅನೇಕ ಸಂಸ್ಕೃತಿಯು ವಿದೇಶೀಯರಿಂದ ನಾಶವಾದ ಉದಾಹರಣೆಗಳು ಇವೆ.

 

About the Author

B Thammayya
ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Be the first to comment on "ಪ್ರಕೃತಿ ಆರಾಧಕರಾದ ತುಳುವರ ಮೇಲೆ ವಿದೇಶಿಯರ ಪ್ರಭಾವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*