ತುಂಬೆಯಲ್ಲಿ 11 ಮೀಟರ್ ಎತ್ತರಕ್ಕೆ ನೂತನ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿದರೆ ಎಷ್ಟು ಜಮೀನು ಮುಳುಗುತ್ತದೆ ಎಂಬ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು, ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಕಾನೂನಿನಡಿ ದಾವೆ ಹೂಡುವುದಾಗಿ ರೈತರು ಎಚ್ಚರಿಸಿದ್ದಾರೆ.
ಪಾಣೆಮಂಗಳೂರಿನಲ್ಲಿ ನಡೆದ ತುಂಬೆ ಡ್ಯಾಂ ಸಂತ್ರಸ್ತರ ರೈತರ ಹೋರಾಟ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಬಿ. ಶ್ರೀಧರ ಶೆಟ್ಟಿ ಬೈಲಗುತ್ತು, ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಜೀವನದಿ ನೇತ್ರಾವತಿಗೆ ತುಂಬೆಯಲ್ಲಿ 11 ವಿ. ಎತ್ತರದ ನೂತನ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿ ಜಿಲ್ಲಾಡಳಿತ ಮತ್ತು ಮ.ನ.ಪಾ ದಿಂದ ಜಲಾವೃತದಿಂದ ನಷ್ಟಕ್ಕೊಳಗಾದ ರೈತರಿಗೆ ನ್ಯಾಯೋಚಿತ ಸೂಕ್ತ ಪರಿಹಾರ ದೊರೆಯದ ಹಿನ್ನಲೆಯಲ್ಲಿ ರಾಜ್ಯ ಉಚ್ಚನ್ಯಾಯಲಾಯದಲ್ಲಿ ದಾವೆ ಹೂಡಿ ರೈತರ ಸಮಕ್ಷಮ ಮರು ಸರ್ವೆ ನಡೆಸಿ ಮುಳುಗಡೆ ಜಮೀನಿನ ಸಂಪೂರ್ಣ ಮಾಹಿತಿ ನೀಡಿ ಒಂದು ತಿಂಗಳೊಳಗೆ ಭೂ ಪರಿಹಾರವನ್ನು ನೀಡಬೇಕೆಂದು ಸ್ಪಷ್ಟ ಅದೇಶ ನೀಡಲಾಗಿದೆ. ಆದರೆ ಹೈಕೋರ್ಟು ಆದೇಶ ಜಾರಿಯಾಗದೆ ಇರುವುದರಿಂದ ಮುಂದಿನ ಕಾನೂನು ಹೋರಾಟದ ಬಗ್ಗೆ ಸರ್ವಾನುಮತದ ತೀರ್ಮಾನ ಕೈಗೊಳ್ಳಲು ಹೈಕೋರ್ಟು ವಕೀಲರಾದ ರಾಜಶೇಖರ ರಾವ್ ಮತ್ತು ಧನಂಜಯ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಾಣೆಮಂಗಳೂರಿನ ಬಂಗ್ಲೆಗುಡ್ಡೆ ನಾರಾಯಣ ಮಯ್ಯರ ಮುಳುಗಡೆ ಭೂಮಿಯಲ್ಲಿ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಭೆ ಸೇರಿತ್ತು
ಈ ಸಂದರ್ಭ ನ್ಯಾಯಾಂಗ ನಿಂದನೆ ಕಾನೂನಿನ ಅಡಿಯಲ್ಲಿ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಸರಕಾರ ಮುಖ್ಯ ಕಾರ್ಯರದರ್ಶಿ, ಮ.ನ.ಪಾ ಕಮಿಷನರ್, ಒಳಚರಂಡಿ ಇಲಾಖಾ ಇಂಜಿನಿಯರ್, ಮ.ನ.ಪಾ ಭೂಸ್ವಾದೀನಾಕಾರಿ, ತಹಶೀಲ್ದಾರ್ ಬಂಟ್ವಾಳ ಇವರ ವಿರುದ್ಧ ದಾವೆ ಹೂಡಿ ಹೈಕೋರ್ಟಿನಿಂದ ನ್ಯಾಯದಾನ ಪಡೆಯಲು ಒಮ್ಮತದ ನಿರ್ಣಯಕ್ಕೆ ಬರಲಾಯಿತು.
ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ , ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎಚ್.ಕೆ ಇದಿನಬ್ಬ , ತಾಲೂಕು ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್, ಕಾರ್ಯಬದರ್ಶಿ ಸುದೇಶ ಮಯ್ಯ ಉಪಸ್ಥಿತರಿದ್ದರು. ಎನ್.ಕೆ.ಇದ್ದಿನಬ್ಬ ಧನ್ಯವಾದವಿತ್ತರು ಶರತ್ ಕುಮಾರ್ ನಿರೂಪಿಸಿದರು. ಮನೋಹರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
Be the first to comment on "ಮುಳುಗಡೆ ಜಮೀನಿನ ಕುರಿತ ಮಾಹಿತಿ ನೀಡಿ"