ರಾಜ್ಯ ಬಜೆಟ್ ನಲ್ಲಿ ನಮಗೆಷ್ಟು ಪಾಲು ಎಂದು ನೋಡುವುದು ಸಹಜ. ಅದರಂತೆ ಸಿಎಂ ಸಿದ್ಧರಾಮಯ್ಯ ಇಂದು ಮಂಡಿಸಿದ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಏನೇನು ಸಿಕ್ಕಿದೆ ನೋಡೋಣ.
- 50 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-67ರ ಮಂಗಳೂರು-ಅತ್ರಾಡಿ ರಸ್ತೆಯಲ್ಲಿ 2.5 ಕಿ.ಮೀ. ಉದ್ದ ರಸ್ತೆಯ ಅಭಿವೃದ್ಧಿ ( ಕಾವೂರು-ಮರಕಡ ಮಹಾನಗರಪಾಲಿಕೆ ಗಡಿಯಿಂದ ಕೆಂಜಾರು ವಿಮಾನ ನಿಲ್ದಾಣದ ಪ್ರವೇಶ ದ್ವಾರದವರೆಗೆ ಚತುಷ್ಫಥ ರಸ್ತೆ).
- ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಿಸ್ತರಣೆಗೆ 286 ಎಕರೆ ಭೂಸ್ವಾಧೀನಕ್ಕಾಗಿ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ- ರಾಜ್ಯ ಸರಕಾರದಿಂದ ಅಗತ್ಯ ಸೌಲಭ್ಯ
- ಮೊಗವೀರರು, ಬೆಸ್ತರ ಸಮಗ್ರ ಅಭಿವೃದ್ಧಿಗಾಗಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಸ್ಥಾಪನೆ
- 10 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಮೇಲ್ದರ್ಜೆಗೆ
- 3 ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಾದರಿಯಲ್ಲಿ ಪ್ರಾದೇಶಿಕ ಹಾಗೂ ಉನ್ನತ ಮಕ್ಕಳ ಆರೋಗ್ಯ ಸಂಸ್ಥೆಯ ಸ್ಥಾಪನೆ
- ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕಾಗಿ 5 ಕೋಟಿ ರೂ. ವೆಚ್ಚದಲ್ಲಿ ಹಾಲಿ ಜೆಟ್ಟಿಯನ್ನು ಇನ್ನೂ 75 ಮೀಟರ್ ವಿಸ್ತರಣೆ
- ಕರಾವಳಿಯ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ 3000 ಮನೆಗಳ ನಿರ್ಮಾಣ
- ಕರಾವಳಿಯ 200 ಮಂಜುಗಡ್ಡೆ ಸ್ಥಾವರಗಳಿಗೆ, 35 ಶೈತ್ಯಾಗಾರಗಳಿಗೆ ವಿದ್ಯುಚ್ಛಕ್ತಿ ಮೇಲೆ ನೀಡುವ ಸಹಾಯಧನ ಪ್ರತೀ ಯುನಿಟ್ ವಿದ್ಯುತ್‍ಗೆ ರೂ. 1.75ಕ್ಕೆ ಹೆಚ್ಚಳ
- ಕರಾವಳಿಯ ನದಿಗಳನ್ನು ಜೋಡಿಸುವ ಪಶ್ಚಿಮವಾಹಿನಿ ಯೋಜನೆಗೆ 100 ಕೋಟಿ ರೂ.
- ಈ ವರ್ಷದಿಂದ ಮಂಗಳೂರು ತಾಲೂಕಿನ ಸಸಿಹಿತ್ಲು ಕಡಲ ತೀರದಲ್ಲಿ ರಾಷ್ಟ್ರೀಯ ವಾರ್ಷಿಕ ಸರ್ಫಿಂಗ್ ಉತ್ಸವ ಆಯೋಜನೆ
- ಮೂಡಬಿದ್ರೆ ಹಾಗೂ ಕಡಬ ಪ್ರತ್ಯೇಕ ತಾಲೂಕು ಸ್ಥಾಪನೆ
- ಬಂಟ್ವಾಳದಲ್ಲಿ ನೂತನ ಆರ್.ಟಿ.ಓ. ಕಚೇರಿ ಸ್ಥಾಪನೆ
- ಮಂಗಳೂರಿನಲ್ಲಿ ಹಜ್‍ಭವನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ
- ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 20 ಕೋಟಿ ರೂ. ಅನುದಾನ
- ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಣಾ ಘಟಕ ಸ್ಥಾಪನೆ
- ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆ
- ಪಿಲಿಕುಲ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 35.69 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಾರಾಲಯ ಡಿಸೆಂಬರ್ 2017ರಲ್ಲಿ ಪ್ರಾರಂಭ
- ಮಂಗಳೂರು ಜಿಲ್ಲಾ ನ್ಯಾಯಾಲಯದ ಛಾವಣಿಯಲ್ಲಿ ಗ್ರಿಡ್ ಸಂಪರ್ಕವಿರುವ ಸೋಲಾರ್ ಛಾವಣಿ ಅಳವಡಿಕೆ
- ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂದಿರುಗುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕೇರಳ ಮಾದರಿಯ ಕಾರ್ಯಕ್ರಮ
Be the first to comment on "ರಾಜ್ಯ ಬಜೆಟ್: ಜಿಲ್ಲೆಗೆ ಏನೇನು?"