ಪಾಣೆಮಂಗಳೂರು ಬಂಗ್ಲೆಗುಡ್ಡೆ ನಾರಾಯಣ ಮಯ್ಯರ ಮುಳುಗಡೆ ಭೂಮಿಯಲ್ಲಿ ತುಂಬೆ ಡ್ಯಾಂ ಸಂತ್ರಸ್ತ ರೈತರ ಸಮಾಲೋಚನಾ ಸಭೆ 11ರಂದು ಸಂಜೆ 4ಕ್ಕೆ ನಡೆಯಲಿದೆ.
ತುಂಬೆ ಡ್ಯಾಂ ಸಂತ್ರಸ್ತರ ರೈತರ ದೀರ್ಘಕಾಲೀನ ಸಮಸ್ಯೆ ಪರಿಹರಿಸುವ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ಈಗಾಗಲೇ ಹೈಕೋರ್ಟು ಜನವರಿ 16 ಕ್ಕೆ ಜಿಲ್ಲಾಡಳಿತ ಹಾಗೂ ಮನಪಾಕ್ಕೆ ಸ್ಪಷ್ಟ ಆದೇಶ ನೀಡಿ ಒಂದು ತಿಂಗಳೊಳಗೆ ರೈತರ ಸಮಕ್ಷಮ ಸರ್ವೇ ನಡೆಸಿ ಪೂರ್ತಿ ಮಾಹಿತಿ ನೀಡಿ ನ್ಯಾಯೋಚಿತ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಹೈಕೋರ್ಟು ವಕೀಲರಾದ ರಾಜಶೇಖರ ರಾವ್ ಮತ್ತು ಧನಂಜಯ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಸಭೆ ನಡೆಯುವುದು.
ಜಿಲ್ಲಾ ರೈತರ ಸಂಘ ಹಸೀರುಸೇನೆ ಅಧ್ಯಕ್ಷ ಶ್ರೀಧರ ಶೆಟ್ಟಿ, ಕಾರ್ಯದರ್ಶಿ ಮನೋಹರ ಶೆಟ್ಟಿ, ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್.ಕೆ ಇದಿನಬ್ಬ , ತಾಲೂಕು ರೈತ ಸಂಘ ಅಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ಸುದೇಶ್ ಮಯ್ಯ ಭಾಗವಹಿಸಲಿದ್ದಾರೆ. ಸಂತ್ರಸ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆ ನೀಡಲು ವಿನಂತಿಸಲಾಗಿದೆ.
Be the first to comment on "11ರಂದು ಸಂತ್ರಸ್ತರ ಸಮಾಲೋಚನೆ"