ಇಂದು ತುಳು ಮಾತನಾಡಲು ಹಿಂಜರಿಯುವ ಹೊತ್ತಿನಲ್ಲಿ ಹಿಂದೊಂದು ಕಾಲದಲ್ಲಿ ತುಳು ಭಾಷೆ ವೈಭವದಿಂದ ಮೆರೆದಿತ್ತು. ತುಳುವರು ಪ್ರಭಾವಶಾಲಿಯಾಗಿದ್ದರು.
- ಬಿ.ತಮ್ಮಯ್ಯ
- ಅಂಕಣ: ನಮ್ಮ ಭಾಷೆ
ನನ್ನರ ಕಾಲದಲ್ಲಿ ತುಳು ಮತ್ತು ತಮಿಳು ಭಾಷೆಯು ಬಹಳ ಸಮೃದ್ಧಿ ಪಡೆದಿತ್ತು. ಸಂಗಕಾಲದ ಅನೇಕ ಕವಿತೆಗಳು ತಮಿಳು ಭಾಷೆಯ, ತುಳುನಾಡಿನ ನವಿಲುಗಳು, ಕಾಡಿನ ವರ್ಣನೆ, ಕುಡುಮಲೈ (ಪಶ್ಚಿಮ ಘಟ್ಟದ ಜರಿಗಳಲ್ಲಿ ಹರಿಯುವ ನೀರಿನ ವರ್ಣನೆ ಮಾಡುತ್ತಾ ಬಿಳಿ ಬಟ್ಟೆಗಳನ್ನು ಒಣಗಿಸಿದಂತೆ) ಎಂದು ವರ್ಣಿಸಲಾಗಿದೆ.
ತುಳು ಮತ್ತು ತಮಿಳು ಭಾಷೆಗಳಲ್ಲಿ ಎರಡು ಭಾಷೆಗಳ ಶಬ್ದಗಳು ಕಂಡುಬರುತ್ತವೆ. ವರಕಲ್ಲ್, ಅಮೆದಿಕಲ್ಲು ಬಿದಿರಿನ ಬಗ್ಗೆ ಮೂಡಬಿದ್ರೆ, ಪಡುಬಿದ್ರೆ ಎಂದು ಕಾರ್ಕಲ್ ಕರಿಕಲ್ಲಿನ ಊರು ಎಂದು ಗುರುತಿಸಬಹುದು. ಅನೇಕ ತುಳು ತಮಿಳು ಶಬ್ದಗಳು ಒಂದೇ ರೀತಿ ಇದ್ದು, ತುಳುವರ ತಮಿಳರ ಜೀವನ ಪದ್ಧತಿಯೂ ಸಾಮಾನ್ಯವಾಗಿತ್ತು. ಕ್ರಿ.ಶ. 4ನೇ ಶತಮಾನದ ನಂತರ ಚೇರನಾಡು ಮುಂದೆ ಕೇರಳವಾಗಿ ಅದರ ಭಾಷೆ ಮಲೆಯಾಳವಾದ ನಂಥರ, ತುಳು ಮತ್ತು ತಮಿಳಿನ ಸಂಪರ್ಕ ದೂರವಾಯಿತು. ತಮಿಳಿನ ಸಂಗ, ಸಾಹಿತ್ಯದಲ್ಲಿ ತುಳು ವಿಚಾರಗಳಿರಲು ಇದೇ ಕಾರಣ.
Be the first to comment on "ತುಳುವಿನ ಹಿರಿಮೆ ಮೆರೆದಂಥ ಕಾಲವದು"