ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ.5ರಂದು ತುಳುವೆರೆ ತುಲಿಪು ಮತ್ತು ಫೆ.6ರಂದು ನಡೆಯಲಿರುವ ಶ್ರೀ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆ ಅಂಗವಾಗಿ ವಿವಿಧೆಡೆಗಳಿಂದ (ಮಂಗಳೂರು, ಬಿ.ಸಿ.ರೋಡ್, ಸುಳ್ಯ, ಪುತ್ತೂರು, ಕಾಸರಗೋಡು, ವಿಟ್ಲ, ಕನ್ಯಾನ, ಕರೋಪಾಡಿ, ಪುಣಚ, ಸಾಲೆತ್ತೂರು) ವಿವಿಧ ಭಾಗಗಳಿಂದ ಭಕ್ತರು ನೀಡಿದ ಹಸಿರುವಾಣಿ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು. ಮಂಗಳಾದೇವಿ ದೇವಸ್ಥಾನದಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಕನ್ಯಾನದಲ್ಲಿ ಮೆರವಣಿಗೆಗೆ ಶಾಸಕಿ ಶಕುಂತಳಾ ಶೆಟ್ಟಿ ಚಾಲನೆ ನೀಡಿದರು. ಕ್ಷೇತ್ರದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಸ್ವಾಗತಿಸಿ, ದೀಪ ಪ್ವಜ್ವಲಿಸಿದರು. ಈ ಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ರಥೋತ್ಸವ ಸಮಿತಿಯ ಪ್ರಮುಖರಾದ ಚ್.ಕೆ.ಪುರುಷೋತ್ತಮ, ಜಯಂತ್ ಜೆ. ಕೋಟ್ಯಾನ್, ದೇವಪ್ಪ ನೋಂಡಾ ಪುತ್ತೂರು, ಪೇಣುಗೋಪಾಲ ಮಾರ್ಲ ಮಂಗಳೂರು, ಬಿ.ಕೆ.ಚಂದ್ರಶೇಖರ ಮಂಗಳೂರು, ರೋಹಿತ್ ಶೆಟ್ಟಿ ನಗ್ರಿಗುತ್ತು, ರಾಧಾಕೃಷ್ಣ ಪಕಳ ಸುಳ್ಯ, ನಯನಾ ರೈ ಪುತ್ತೂರು, ಸರ್ವಾಣಿ ಪಿ.ಶೆಟ್ಟಿ, ಅಶೋಕ್ ಕುಮಾರ್ ಬಿಜೈ, ಸಮಿತಿ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಅಜಿತ್ ನಾಥ್ ಶೆಟ್ಟಿ, ತಾರಾನಾಥ ಶೆಟ್ಟಿ ಒಡಿಯೂರು, ಉಗ್ಗಪ್ಪ ಶೆಟ್ಟಿ ಕೊಂಬಿಲ, ಪದ್ಮನಾಭ ಒಡಿಯೂರು, ಪಟ್ಲಗುತ್ತು ರಘುನಾಥ ಶೆಟ್ಟಿ, ಲಿಂಗಪ್ಪ ಗೌಡ ಪನೆಯಡ್ಕ, ರಘುನಾಥ ರೈ ಅರ್ಪಿಣಿ, ಕೆ.ಪಿ.ರಘುರಾಮ ಶೆಟ್ಟಿ, ವಿನೋದ್ ಶೆಟ್ಟಿ ಪಟ್ಲ, ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ದಾಮೋದರ ಶೆಟ್ಟಿ ಪಟ್ಲಗುತ್ತು, ಶಶಿಧರ ಶೆಟ್ಟಿ ಜಮ್ಮದಮನೆ, ವಾಸುದೇವ ಕೊಟಾರಿ, ಯೋಜನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
Be the first to comment on "ಒಡಿಯೂರು: ಹೊರೆಕಾಣಿಕೆ ಸಮರ್ಪಣೆ"