ಡ್ರಗ್ಸ್ ವಿರೋಧಿ ಮರಳು ಕಲಾಕೃತಿ ರಚನೆ

Pic by Kishor yenankudlu

ಮಂಗಳಗಂಗೋತ್ರಿ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸಂಘ (ಮಾಮ್), ಭಾರತೀಯ ರೆಡ್‌ಕ್ರಾಸ್ ಮತ್ತು ಮಂಗಳೂರಿನ ಮಹಾಲಸಾ ಕಲಾ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಜ.27ರಂದು ಮರಳು ಕಲಾಕೃತಿ ರಚನಾ ಕಾರ್ಯಕ್ರಮ ಪಣಂಬೂರು ಕಡಲ ತೀರದಲ್ಲಿ ನಡೆಯಿತು

‘ಯುವಜನತೆ ಮತ್ತು ಮಾದಕವಸ್ತುಗಳು’ ಎಂಬ ವಿಷಯದಡಿಯಲ್ಲಿ ಕಲಾಕೃತಿ ರಚನೆಗೊಳ್ಳಲಿದೆ ಮಹಾಲಸಾ ಕಾಲೇಜ್‌ನ 13 ಜನರ ಕಲಾ ತಂಡದಲ್ಲಿ ಮಹೀಂದ್ರ ಆಚಾರ್ಯ ಹಾಗೂ ಅಶ್ವತ್ ಭಟ್ ಮುಂದಾಳತ್ವ ವಹಿಸಿದರು.

ಈ ಕಾರ್‍ಯಕ್ರಮದ ಉದ್ದೇಶ ಮಾದಕವಸ್ತುಗಳ ನಿರ್ಮೂಲನೆ ಆಗಿದ್ದು, ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ರೆಡ್‌ಕ್ರಾಸ್‌ನ ಜಿಲ್ಲಾವಿಪತ್ತು ನಿರ್ವಹಣಾ ಉಪ ಸಮಿತಿ ಅಧ್ಯಕ್ಷ ವೇಣು ಶರ್ಮಾತಿಳಿಸಿದರು. ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್ ಮಾತನಾಡಿ ಸಂವಹನದ ಕುರಿತು ಕಾಲೇಜುಗಳಲ್ಲಿ ತರಬೇತಿ ನೀಡುವ ಬಗ್ಗೆ  ’ಮಾಮ್’ ಕ್ರಿಯಾಶೀಲವಾಗಲಿದೆ ಎಂದರು. ಎಂ. ಆರ್. ಪಿ. ಎಲ್. ನ ಡಿಜಿಎಂ (ಎಚ್ ಆರ್) ಲಕ್ಷ್ಮೀಕುಮಾರನ್  ಮಾತನಾಡಿ ’ದಕ್ಷಿಣಕನ್ನಡ ಜಿಲ್ಲೆ ವೈವಿಧ್ಯಮಯ ಕಲಾ ಮಂಡಲ’ ಎಂದರು. ಮಹಾಲಸಾ ಕಾಲೇಜ್ ಪ್ರಾಂಶುಪಾಲ ಪುರುಷೋತ್ತಮ ನಾಯಕ್ ಶುಭ ಹಾರೈಸಿದರು. ಕುಮಾರಿ ಧನ್ಯ ಕಾರ್‍ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಡ್ರಗ್ಸ್ ವಿರೋಧಿ ಮರಳು ಕಲಾಕೃತಿ ರಚನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*