ಬಂಟ್ವಾಳಕ್ಕೆ ಎಆರ್ ಟಿಒ ಕಚೇರಿ ಮಂಜೂರು

ಕೊನೆಗೂ ಬಂಟ್ವಾಳಕ್ಕೆ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖಾ ಕಚೇರಿ ಆರಂಭಕ್ಕೆ ಹಸಿರು ನಿಶಾನೆ ದೊರಕಿದೆ.

www.bantwalnews.com report

ಜಾಹೀರಾತು

ರಾಜ್ಯದ ಮೂರು ಕಡೆ ಕಚೇರಿ ತೆರೆಯಲು ಸರಕಾರ ಆದೇಶ ಹೊರಡಿಸಿದ್ದು ಅವುಗಳಲ್ಲಿ ಬಂಟ್ವಾಳವೂ ಒಂದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಉಳಿದ ಎರಡು ಪ್ರದೇಶಗಳು.

ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನ ನೋಂದಣಿಗಳನ್ನು ಅನುಸರಿಸಿ ಈ ಪ್ರದೇಶಗಳಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಕಚೇರಿ ತೆರೆಯಲು ಈ ಮೊದಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಕಚೇರಿಗೆ ಸೂಕ್ತ ಜಾಗ ಹಾಗೂ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಲು ಅನುವು ಮಾಡಲು ಸರಕಾರ ಸೂಚನೆ ನೀಡಿದೆ.

ಕಚೇರಿ ಪ್ರಾರಂಭಿಸುವ ಬಗ್ಗೆ ಹುದ್ದೆಗಳ ಮಂಜೂರಾತಿ, ಪೀಠೋಪಕರಣಗಳ  ಖರೀದಿ, ಕಚೇರಿ ಹಾಗೂ ಇನ್ನಿತರ ಅಗತ್ಯಗಳಿಗಾಗಿ ಅನುದಾನದ ಮಂಜೂರಾತಿ ಬಗ್ಗೆ ಪ್ರಸ್ತಾವನೆಯನ್ನು ಪಡೆದು ಪರಿಶೀಲಿಸಿ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸಾರಿಗೆ ಇಲಾಖೆಯ ಉಪಕಾರ್ಯದರ್ಶಿ ಕೆ. ಬೀರೇಶ್ ತಿಳಿಸಿದ್ದಾರೆ.

ಎಆರ್‌ಟಿಓ ಕಚೇರಿ ಬಂಟ್ವಾಳದಲ್ಲೇ ಸ್ಥಾಪನೆಗೊಂಡರೆ ಈ ಭಾಗದ ಜನ ಸಾರಿಗೆ ಇಲಾಖೆಗೆ ಸಂಬಂಧಪಟ್ಟ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರದಲ್ಲಿ ಅಲೆದಾಡುವುದು ತಪ್ಪುತ್ತದೆ. ದಿನವಿಡೀ ಕೆಲಸ ಬಿಟ್ಟು ಮಂಗಳೂರಿನ ಪ್ರಾಧಿಶೀಕ ಕಚೇರಿಯಲ್ಲಿ ಇದ್ದು ಕೆಲಸ ಮಾಡಿಕೊಳ್ಳಬೇಕಾದ ಕೆಲವು ಬಾರಿ ಎರಡು ಮೂರು ದಿನ ಹೋದರೂ ಕೆಲಸವಾಗದೆ ವಾಪಸ್ಸಾದ ಉದಾಹರಣಗಳಿವೆ. ಈ ನಿಟ್ಟಿನಲ್ಲಿ ತಾಲೂಕು ಕೇಂದ್ರದಲ್ಲು ಎಆರ್‌ಟಿಓ ಕಚೇರಿ ಆರಂಭವಾದರೆ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಬಹು ಬೇಡಿಕೆಯ ಮಿನಿ ವಿಧಾನಸೌಧ, ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ, ಮೆಸ್ಕಾಂ ನೂತನ ಕಟ್ಟಡ, ನಿರೀಕ್ಷಣ ಮಂದಿರ ಮಂಜೂರುಗೊಂಡು ನಿರ್ಮಾಣಹಂತದಲ್ಲಿದೆ. ಈ ನಡುವೆ ಬಂಟ್ವಾಳಕ್ಕೆ ಹೊಸ ಎಆರ್‌ಟಿಓ ಕಚೇರಿಯನ್ನು ಸರಕಾರ ಮಂಜೂರುಗೊಳಿಸಿದ್ದು ಇಲ್ಲಿನ ಒಟ್ಟು ಪ್ರಗತಿಗೆ ಪೂರಕವಾಗಿದೆ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಂಟ್ವಾಳಕ್ಕೆ ಎಆರ್ ಟಿಒ ಕಚೇರಿ ಮಂಜೂರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*