ಜಿಲ್ಲಾ ಸುದ್ದಿ

ಆಳ್ವಾಸ್ ವಿರಾಸತ್ ವೈಭವ ಆರಂಭ

bantwalnews.com report

ಪುತ್ತಿಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ 2017 ಆರಂಭಗೊಂಡಿದೆ.

ಜಾಹೀರಾತು

23ನೇ ವರ್ಷದ ಆಳ್ವಾಸ್ ವಿರಾಸತ್‌ನ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಸಾಂಪ್ರದಾಯಿಕ ವರ್ಣರಂಜಿತ ಮೆರವಣಿಗೆಗೆ ಚಾಲನೆ ದೊರಕಿತು.

ಶಂಖದ ನಾದ, ಕೊಂಬಿನ ಮೈನವಿರೇಳಿಸುವ ಧ್ವನಿ, ಇವುಗಳ ಮಧ್ಯೆ ಮಂಗಳೂರಿನ ಚೆಂಡೆ ವಾದನದ ಸೊಗಸು ನೆರೆದವರ ಮನಸೂರೆಗೊಳಿಸಿತು. ಶ್ರೀಲಂಕಾದ ನೃತ್ಯ ಕಲಾವಿದರು, ಕಲಶ, ಸಾಕ್ಸೊಪೋನ್ ಹಾಗೂ ಕದಾನಿ, ವಿವಿಧ ರಾಜ್ಯಗಳ ವೈವಿದ್ಯಮಯ ಕಲಾಪ್ರಕಾರಗಳನ್ನು ಮೆರವಣಿಗೆಯಲ್ಲಿ ಪರಿಚಯಿಸಲಾಯಿತು.  ಸುಮಾರು 9 ಕಲಾಪ್ರಕಾರಗಳು ಮೆರವಣೀಗೆಯಲ್ಲಿ ಪ್ರದರ್ಶನ ನೀಡಿ ಸಭಿಕರ ಗಮನಸೆಳೆದರು.

ಜಾಹೀರಾತು

ಆಳ್ವಾಸ್ ವಿರಾಸತ್‌ಗಾಗಿ ಸಿದ್ಧಗೊಂಡಿರುವ ಪ್ರಶಾಂತ ವಾತಾವರಣದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಗುತ್ತಿನ ಮನೆಯ ಪ್ರವೇಶಧ್ವಾರ ಆವರಣದಿಂದ ಆರಂಭಗೊಂಡ ಕಲಾ ಮೆರವಣಿಗೆ ಸುಮಾರು 15 ನಿಮಿಷ ಹೊಸ ಸಾಂಸ್ಕೃತಿಕ ಲೋಕವನ್ನು ಸೃಷ್ಟಿ ಮಾಡಿತು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ