ತುಳು ಭಾಷೆಯ ಕುರಿತು ಸಾಕಷ್ಟು, ವಿಚಾರ, ವಿಮರ್ಶೆಗಳು ನಡೆಯುತ್ತವೆ. ಆದರೆ ತುಳು ಕೇವಲ ಮಾತನಾಡುವ ಭಾಷೆಯಲ್ಲ, ಅಕ್ಷರರೂಪದಲ್ಲೂ ತುಳುವಿನ ಒಡನಾಟ ಸಾಧ್ಯ. ಆದರೆ ತುಳು ಅಕ್ಷರಮಾಲೆ ಪುಸ್ತಕ ಹೊರತಂದದ್ದು ಖಾಸಗಿ ಉತ್ಸಾಹಿಗಳು..
- ಬಿ.ತಮ್ಮಯ್ಯ
ಇತ್ತೀಚೆಗೆ ಆಕಾಶವಾಣಿಯ ಕನ್ನಡ ರಾಜ್ಯೋತ್ಸವದ ಚಿಂತನ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿ ವಿಷ್ಣು ನಾಯ್ಕ ಅವರು ಮಾತನಾಡಿದರು. ಪಂಚ ದ್ರಾವಿಡ ಭಾಷೆಗಳಲ್ಲಿ ತುಳುವಿಗೆ ಲಿಪಿ ಇಲ್ಲ. ಉಳಿದ ತಮಿಳು, ತೆಲುಗು, ಕನ್ನಡ, ಮಲೆಯಾಳಂಗಳಿಗೆ ಲಿಪಿ ಇದೆ ಎಂದರು.
ನಾನು ಪ್ರಾಥಮಿಕ ತರಗತಿಯಲ್ಲಿ ಓದುವಾಗಲೂ ಇದೇ ಅಭಿಪ್ರಾಯ ಇತ್ತು. ಆದರೆ ವೆಂಕಟರಾಜ ಪುಣಿಂಚಿತ್ತಾಯರು ಸುಮಾರು 2000ನೇ ಇಸವಿಯಲ್ಲಿ ತುಳುವಿಗೆ ಲಿಪಿ ಇತ್ತು. ಆಳುಪರ ಕಾಲದಲ್ಲಿ ತುಳು ಶಾಸನಗಳು ಮತ್ತು ಮಹಾಭಾರತ, ರಾಮಾಯಣ, ಕಾವೇರಿ ಮೊದಲಾದ ಗ್ರಂಥಗಳು ಓಲೆಗರಿಯಲ್ಲಿ ಬರೆದುದನ್ನು ಸಂಶೋಧನೆ ಮಾಡಿ ಹೊರತಂದಿದ್ದರು. ಮತ್ತು ಆ ಗ್ರಂಥಗಳ ಆಧಾರದಲ್ಲಿ ತುಳು ಅಕ್ಷರಮಾಲೆ ಸಿದ್ಧಪಡಿಸಿದರು. ಈ ಅಕ್ಷರಮಾಲೆಯನ್ನು ಈಗಲೂ ತುಳು ಅಕಾಡೆಮಿಯಲ್ಲಿ ನೀವು ನೋಡಬಹುದು.
2009ರಲ್ಲಿ ವಿಶ್ವ ತುಳು ಸಮ್ಮೇಳನದಲ್ಲಿ ತುಳು ಅಕ್ಷರಮಾಲೆಯನ್ನು ಬಿಡುಗಡೆಗೊಳಿಸಿ, ಸಾರ್ವಜನಿಕರಿಗೆ ಸಿಗುವಂತೆ ಆಯಿತು. ತುಳು ಸಾಹಿತ್ಯ ಅಕಾಡೆಮಿ ಈ ಬಗ್ಗೆ ಮುತುವರ್ಜಿ ತೆಗೆದುಕೊಳ್ಳದುದರಿಂದ ಖಾಸಗಿಯವರು ತುಳು ಅಕ್ಷರಮಾಲೆ ಪುಸ್ತಕ ಬಿಡುಗಡೆಗೊಳಿಸಿದರು. ಬೊಂಬಾಯಿಯ ಜಯಕರ ಪೂಜಾರಿ, ಉಡುಪಿಯ ಉದಯಸೂರ್ಯ, ಉಳ್ಳಾಲದ ಜೀವಿಎಸ್ ಉಳ್ಳಾಲ, ಕಾಸರಗೋಡಿನ ಪ್ರವೀಣ್ ರಾಜ್ ಇವರು ಅಕ್ಷರಮಾಲೆ ಪುಸ್ತಕ ಪ್ರಕಟಿಸಿದರು.
ಇವುಗಳಲ್ಲಿ ಕೆಲವು ವ್ಯತ್ಯಸ ಕಂಡುಬಂದುದರಿಂದ ತುಳು ಸಾಹಿತ್ಯ ಅಕಾಡೆಮಿ ಒಂದು ಸಮಿತಿ ರಚಿಸಿತು. ಆ ಸಮಿತಿಯಲ್ಲಿ ಧರ್ಮಸ್ಥಳದ ಡಾ.ವಿಘ್ನರಾಜ್, ರಾಧಾಕೃಷ್ಣ ಬೆಳ್ಳೂರು,, ಉಡುಪಿಯ ಕೃಷ್ಣಯ್ಯ ಮೊದಲಾದವರು ಇದ್ದರು. ಅವರು ಎಲ್ಲಾ ಗ್ರಂಥಗಳ ಅಕ್ಷರಗಳ ಅಧ್ಯಯನ ಮಾಡಿ, ಅಕ್ಷರಮಾಲೆಯನ್ನು ತುಳು ಸಾಹಿತ್ಯ ಅಕಾಡೆಮಿಗೆ ಸಲ್ಲಿಸಿದ್ದಾರೆ. ಆದರೂ ತುಳು ಸಾಹಿತ್ಯ ಅಕಾಡೆಮಿ ಪುಸ್ತಕವನ್ನು ಪ್ರಕಟಿಸದೆ ಖಾಸಗಿಯವರ ಪುಸ್ತಕವನ್ನು ತುಳುವರು ಅವಲಂಬಿಸುವಂತೆ ಆಯಿತು.
…………………………………………………………………………………………………………………………………..
ಲೇಖಕರು ತುಳು ಲಿಪಿ ಕುರಿತು ತಮಗಿರುವ ಮಾಹಿತಿಯನ್ನು ಆಸಕ್ತರೊಂದಿಗೆ ಹಂಚಿಕೊಳ್ಳತ್ತಾರೆ. ವಿವಿಧ ಶಾಲೆ, ಕಾಲೇಜುಗಳಲ್ಲಿ ತುಳು ಲಿಪಿಯ ಮೂಲಕ ಭಾಷೆಯ ಅಭಿವೃದ್ಧಿ ಸಾಧ್ಯ ಎಂಬುದನ್ನು ತಿಳಿಹೇಳುವ ಕಾರ್ಯ ಮಾಡಿದ್ದಾರೆ. ತುಳು ಲಿಪಿ ಕುರಿತು ಲೇಖಕರ ಬರೆಹದ ಮುಂದಿನ ಭಾಗ ಮತ್ತೆ ಬುಧವಾರ…
Be the first to comment on "ತುಳು ಲಿಪಿಯ ಅರಿವು, ಅಭಿಮಾನ"