ನಳಿನ್ ರಥಯಾತ್ರೆ ಯಶಸ್ಸಿಗೆ ರಾಜೇಶ್ ನಾಯ್ಕ್ ಮನವಿ

ಬಂಟ್ವಾಳ: ಎತ್ತಿನಹಳ್ಳ ಎಂಬ ಪ್ರದೇಶವನ್ನು ಎತ್ತಿನಹೊಳೆ ಎಂದು ನಾಮಾಂಕಿತಗೊಳಿಸಿ ದ.ಕ ಜಿಲ್ಲೆಯನ್ನು ಬರಡು ಭೂಮಿಯಾನ್ನಾಗಿಸಲು, ನೇತ್ರಾವತಿ ತಿರುವು ಯೋಜನೆಗೆ ಚಾಲನೆ ನೀಡಿ ಈ ರಾಜ್ಯದ ಜನತೆಯ ಕೋಟಿ ಕೋಟ್ಯಾಂತರ ರೂಪಾ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲು ಕರ್ನಾಟಕದ ಜನ ವಿರೋಧಿ ಕಾಂಗ್ರೆಸ್ ಸರಕಾರದ ಈ ಯೋಜನೆಯ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲ್‌ ನೇತೃತ್ವದ ಪಕ್ಷಾತೀತ ಹೋರಾಟದ ಪಂಚ ತೀರ್ಥ- ಸಪ್ತ ಕ್ಷೇತ್ರ ರಥ ಯಾತ್ರೆಯು ತಾ.11 ಮಧ್ಯಾಹ್ನ 2.30 ಕ್ಕೆ ಕಲ್ಲಡ್ಕ ಹಾಗೂ 3.30ಕ್ಕೆ ಬಿ.ಸಿ.ರೋಡ್ ಆಗಮಿಸಲಿದೆ.

ಯೋಜನೆಯಿಂದ ದ.ಕ ಜಿಲ್ಲೆಯ ಜನ ಕುಡಿಯಲು ಕೂಡ ನೀರಿಗಾಗಿ ಪರದಾಡುವ ಸಂಭವ ಸೃಷ್ಟಿಯಾಗುತ್ತದೆ. ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ವೈಭವವು ಸಂಪೂರ್ಣ ನಶಿಸಿ ಹೋಗುವ ಭೀತಿ ಎದುರಾಗುತ್ತದೆ. ಭತ್ತ, ತೆಂಗು, ಅಡಿಕೆ ಬೆಳೆಯನ್ನು ನಂಬಿರುವ ರೈತಾಪಿ ವರ್ಗ ,ಯಕ್ಷಗಾನ, ನಾಗಾರಾಧನೆ, ಭೂತಾರಾಧನೆಯಿಂದ ಭಾವನಾತ್ಮಕ ಜೀವನವನ್ನು ನಡೆಸುತ್ತಿರುವ ತುಳುನಾಡಿನ ಈ ಜನ ಮುಂದೊಂದು ದಿನ ಈ ಜಿಲ್ಲೆಯನ್ನು ತೊರೆದು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.      ಕುಮಾರಧಾರಾ, ನೇತ್ರಾವತಿ ,ಪಾಲ್ಗುಣಿ, ಶಾಂಭವಿ, ನಂದಿನಿ ಪರಮ ಪವಿತ್ರ ಪಂಚ ನದಿಗಳ ಜಲದೊಂದಿಗೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಪ್ಪಿನಂಗಡಿ, ಪೊಳಲಿ, ಕದ್ರಿ, ಬಪ್ಪನಾಡು, ಕಟೀಲು  ಪುಣ್ಯ ಸಾನಿಧ್ಯಗಳನ್ನು ಸಂಪರ್ಕಿಸುವ ಈ ರಥವು ಬಂಟ್ವಾಳ ತಾಲೂಕಿನ ಕಲ್ಲಡ್ಕ ಹಾಗೂ ಬಿ,ಸಿ.ರೋಡಿಗೆ ಆಗಮಿಸುವ ಸಂದರ್ಭ ಜಾತಿ, ಮತ, ಪಕ್ಷಭೇದ ಮರೆತು ಹೋರಾಟದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೋಳುವ ಮೂಲಕ ಕರ್ನಾಟಕ ಸರಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸೋಣ ಎಂದು ರಾಜೇಶ್ ನಾಯ್ಕ್ ಉಳೇಪಾಡಿ ವಿನಂತಿಸಿದ್ದಾರೆ.

 

ಜಾಹೀರಾತು
ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ನಳಿನ್ ರಥಯಾತ್ರೆ ಯಶಸ್ಸಿಗೆ ರಾಜೇಶ್ ನಾಯ್ಕ್ ಮನವಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*