ವಿಟ್ಲ: ವಿಟ್ಲ ಬೊಬ್ಬೆಕೇರಿ ಗಜಾನನ ಸಭಾಭವನದಲ್ಲಿ ವಿಟ್ಲ ಜೇಸಿಯ ನೂತನ ಮಹಿಳಾ ಘಟಕ ಪದಗ್ರಹಣ ಸಮಾರಂಭ ನಡೆಯಿತು.
ವಲಯ 15 ರ 2017ರ ನಿಯೋಜಿತ ಅಧ್ಯಕ್ಷ ಸಂತೋಷ್ ಜಿ. ಮಾತನಾಡಿ, ವಿಟ್ಲ ಜೇಸಿಐ ಘಟಕ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ವಲಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಮುಂದಿನ ದಿನದಲ್ಲಿ ರಾಷ್ಟ್ರ ಮಟ್ಟಕ್ಕೇರಲಿ ಎಂದು ತಿಳಿಸಿದರು.
ಜಾಹೀರಾತು
ವಿಟ್ಲ ಜೇಸಿಐಯ ಮಹಿಳಾ ಘಟಕ ವರ್ಷದ ನೂತನ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ಪ್ರಮಾಣ ವಚನ ಸ್ವೀಕರಿಸಿ, ಅಧಿಕಾರ ಪಡೆದುಕೊಂಡರು. ಕಲ್ಯಾಣಪುರ ಜೇಸಿಐ ಘಟಕದ ಕಾರ್ಯದರ್ಶಿ ಶ್ರೀನಿವಾಸ್, ಮುಖ್ಯ ಶಿಕ್ಷಕ ಶಂಕರ್ ಸಾರಡ್ಕ, ಕಿರಣ ಕುಮಾರ್ ನೂತನ ಘಟಕಕ್ಕೆ ಶುಭ ಹಾರೈಸಿದರು.
ರಮೇಶ. ಬಿ.ಕೆ, ಕೀರ್ತನಾ, ಪರಮೇಶ್ವರ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಶ್ರುತಿ ಶೆಟ್ಟಿ ನೂತನ ಘಟಕದ ಅಧ್ಯಕ್ಷರ ಪರಿಚಯ ಮಾಡಿದರು. ನಿಯೋಜಿತ ವಲಯ ಉಪಾಧ್ಯಕ್ಷ ಮೋಹನ ಎ., ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೆ. ವಿ. ಸ್ವಾಗತಿಸಿದರು. ವಿಟ್ಲ ಜೇಸಿಐ ಕಾರ್ಯದರ್ಶಿ ಲೂಯಿಸ್ ಮಸ್ಕರೆಂಞಸ್ ಪದೋನ್ನತಿಗೊಂಡ ವಿಟ್ಲ ಘಟಕದ ಸದಸ್ಯರ ಪಟ್ಟಿ ಓದಿದರು. ವರ್ಷದ ಕಾರ್ಯದರ್ಶಿ ಮಮತಾ ವಂದಿಸಿದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಜೇಸಿಯ ನೂತನ ಮಹಿಳಾ ಘಟಕ ಪದಗ್ರಹಣ ಸಮಾರಂಭ"
Be the first to comment on "ಜೇಸಿಯ ನೂತನ ಮಹಿಳಾ ಘಟಕ ಪದಗ್ರಹಣ ಸಮಾರಂಭ"