ಲೇಖನಿ ಮಾದರಿ ಮದುವೆ ಆಮಂತ್ರಣ

ಬಂಟ್ವಾಳ: ಪತ್ರಕರ್ತನಿಗೆ ಲೇಖನಿಯೇ ಆಸ್ತಿ. ಲೇಖನಿ ಖಡ್ಗಕ್ಕಿಂತ ಹರಿತ. ಈ ಎಲ್ಲದರ ನಡುವೆ ಬಂಟ್ವಾಳದ ಪತ್ರಕರ್ತನೊಬ್ಬರು ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಲೇಖನಿ ಮಾದರಿಯಲ್ಲಿ ಮುದ್ರಿಸಿ ಗಮನ ಸೆಳೆದಿದ್ದಾರೆ.

img-20161115-wa0034

ಬಿ.ಸಿ.ರೋಡಿನ ಯುವ ಛಾಯಾಗ್ರಾಹಕ, ಪತ್ರಕರ್ತ ಕಿಶೋರ್ ಪೇರಾಜೆಯವರ ಲೇಖನಿ ಮಾದರಿಯ ವಿವಾಹ ಆಮಂತ್ರಣ ಅತ್ಯಾಕರ್ಷವಾಗಿ ಮೂಡಿ ಬಂದಿದೆ.

ಜಾಹೀರಾತು

ಕಂಪ್ಯೂಟರ್ ಯುಗದ ಪ್ರಸಕ್ತ ಕಾಲಗಟ್ಟದಲ್ಲಿ ಲೇಖನಿ ಮತ್ತು ಪತ್ರಕರ್ತರ ನಡುವಿನ ಅಂತರ ಹಚ್ಚುತಿದೆಯಾದರೂ ಇದು ಬಿಡಲಾಗದ ನಂಟು ಎಂಬುದನ್ನು ಈ ಆಮಂತ್ರಣ ಪತ್ರಿಕೆ ಸಾರಿ ಹೇಳುತ್ತಿದೆ.

ಛಾಯಾಗ್ರಾಹಕರಾಗಿ ವೃತ್ತಿ ಆರಂಭಿಸಿದ ಕಿಶೋರ್ ಪೇರಾಜೆ ಬಳಿಕ ಮಾಧ್ಯಮದ ಜೊತೆ ಬೆರೆತು ಮಾಧ್ಯಮ ಛಾಯಾಗ್ರಾಹಕರಾಗಿಯೂ ಗುರುತಿಸಿಕೊಂಡವರು. ತನ್ನ ವಿಹಾಹದ ಆಮಂತ್ರಣ ಪತ್ರಿಕೆಯಲ್ಲೂ ಇದನ್ನು ಸೊಗಸಾಗಿ ಉಲ್ಲೇಖಿಸಿದ್ದು ’ಕ್ಯಾಮರಾ ನನಗೆ ಬದುಕು ಕೊಟ್ಟಿದೆ… ಲೇಖನಿ ಆ ಬದುಕಲಿ ಗೌರವ ತಂದಿದೆ’ ಎಂಬ ಪದಗುಚ್ಚಗಳು ಅಹ್ವಾನಿತನನ್ನು ಆಕರ್ಷಿಸುತ್ತದೆ.

ದಿನಂಪ್ರತಿ ಅದೆಷ್ಟೋ ಆಮಂತ್ರಣಗಳು ನಮ್ಮ ನಿಮ್ಮ ಕೈ ಸೇರುತ್ತದೆ. ಕಾರ್ಯಕ್ರಮ ಮುಗಿದ ಬಳಿಕ ಅವು ಕಸವಾಗಿ ಬಿಡುತ್ತದೆ. ಆದರೆ ಕಿಶೋರ್ ಪೇರಾಜೆ ಅವರ ಮದುವೆಯ ವಿಶಿಷ್ಠ ಆಮಂತ್ರಣ ನೋಡಿದವರೆಲ್ಲ ಹೇಳುವ ಒಂದೇ ಮಾತು ಸಂಗ್ರಹ ಯೋಗ್ಯ ಆಮಂತ್ರಣವಾಗಿದೆ ಎಂಬುದು.

ಆಮಂತ್ರಣ ಪಡೆದವರೆಲ್ಲ ಒಂದಾಷ್ಟು ಸಮಯ ಪತ್ರಿಕೆಯನ್ನು ತಿರುಗಿಸಿ ತಿರುಗಿಸಿ ನೋಡುವುದಿದೆ. ಬಳಿಕ ಸೂಪರ್ ಆಮಂತ್ರಣ, ಚೆನ್ನಾಗಿದೆ, ಪತ್ರಕರ್ತನಿಗೆ ಹೇಳಿದ ಆಮಂತ್ರಣ ಎಂದು ಹೇಳಿದ್ದೂ ಇದೆ. ಈ ತಿಂಗಳಲ್ಲಿ ಈ ವಿವಾಹ ನಡೆಯಲಿದೆ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಲೇಖನಿ ಮಾದರಿ ಮದುವೆ ಆಮಂತ್ರಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*