ಬಂಟ್ವಾಳ : ಇಲ್ಲಿನ ಕೆಳಗಿನಪೇಟೆ ಜುಮಾ ಮಸೀದಿ ಆಡಳಿತ ಸಮಿತಿ ಅಧೀನಕ್ಕೊಳಪಟ್ಟ ಮನಾರುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ನ 13 ರಂದು ಭಾನುವಾರ ಬೆಳಿಗ್ಗೆ 9ಕ್ಕೆ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉದ್ಘಾಟಿಸುವರು. ಸ್ಥಳೀಯ ಮುದರ್ರಿಸ್ ಅನ್ಸಾರ್ ಫೈಝಿ ಬುರ್ಹಾನಿ ಅಧ್ಯಕ್ಷತೆ ವಹಿಸುವರು. ಕಲ್ಲಡ್ಕ ಮುದರ್ರಿಸ್ ಹೈದರ್ ದಾರಿಮಿ ಮುಖ್ಯ ಭಾಷಣಗೈಯುವರು.
ಮುಖ್ಯ ಅತಿಥಿಗಳಾಗಿ ನೆಹರುನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಬಶೀರ್ ಅಹ್ಮದ್ ದುಬೈ, ಇಕ್ಬಾಲ್ ಅಹ್ಮದ್ ದುಬೈ, ಇಕ್ಬಾಲ್ ರಿಯಾದ್, ಬಂಟ್ವಾಳ ಪುರಸಭಾ ಸದಸ್ಯ ಮೂನಿಶ್ ಅಲಿ, ಬಂಟ್ವಾಳ ಜಮಾಅತ್ ಕಮಿಟಿಯ ರಿಯಾದ್ ಸಮಿತಿ ಅಧ್ಯಕ್ಷ ಸೆಲೀಂ ಬಂಟ್ವಾಳ, ಶೇಖ್ ಆದಂ ಹುಸೈನ್ ಕಮಲ್‌ಕಟ್ಟೆ, ಎಸ್.ಎಂ. ಸಲೀಂ ಹಾಜಿ ಮಾರಿಪಳ್ಳ, ಮುಹಮ್ಮದ್ ಹನೀಫ್ ಫೈಝಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಅರಬಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Be the first to comment on "ನ 13 ರಂದು ಬಂಟ್ವಾಳ ಮದ್ರಸ ಕಟ್ಟಡ ಉದ್ಘಾಟನೆ"