ನಮ್ಮ ಬಗ್ಗೆ

ನಮ್ಮೂರು ಬಂಟ್ವಾಳ. ರಾಜಕೀಯ, ಕಲೆ, ಸಂಸ್ಕೃತಿ, ಸಾಹಿತ್ಯ, ವ್ಯಾಪಾರ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿರುವ ಪ್ರದೇಶ. ಧಾರ್ಮಿಕ ಸಮನ್ವಯತೆ ಇಲ್ಲಿನ ವಿಶೇಷ. ಇಂದು ಮುಂಬೈ, ದೆಹಲಿಯಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಗಳಲ್ಲೂ ವಿವಿಧ ಉದ್ಯೋಗ, ವ್ಯವಹಾರ ನಿಮಿತ್ತ ನೆಲೆಸಿದ್ದರೂ ನಾವು ಊರನ್ನು ಗುರುತಿಸಿಕೊಂಡು ಹೆಮ್ಮೆಪಡುತ್ತೇವೆ.

ಹೀಗಾಗಿ ನಮ್ಮೂರಲ್ಲೇನು ನಡೆಯುತ್ತದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಇಂದಿನ ಸಮಾಚಾರ ನಾಳೆ ವೃತ್ತಪತ್ರಿಕೆಗಳಲ್ಲಿ ಬರುವುದು ಇದ್ದೇ ಇದೆ. ಆದರೆ ಅದಕ್ಕೂ ಮುನ್ನ ತಾಲೂಕಿನಲ್ಲಿ ಘಟಿಸುವ ಪ್ರಮುಖ ವಿಚಾರ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮಾಹಿತಿಯನ್ನು ನಿಮ್ಮ ಮುಂದಿಡುವ ಉದ್ದೇಶ bantwalnews ಗಿದೆ. ಬಂಟ್ವಾಳ ತಾಲೂಕಿನ ದೈನಂದಿನ ಸುದ್ದಿ ನೀಡುವ ಮೊತ್ತಮೊದಲ ಜಾಲತಾಣವಾಗಿ ನಮ್ಮೂರ ವಿಚಾರಗಳನ್ನು ಜಗತ್ತಿಗೆ ತಿಳಿಸುವ ಕಾರ್ಯವನ್ನು www.bantwalnews.com ಮೂಲಕ 2016, ನವೆಂಬರ್ 10ರಂದು ಆರಂಭಿಸಲಾಗಿದೆ.

ಸಾಮಾನ್ಯವಾಗಿ ವೆಬ್ ಪತ್ರಿಕೆಗಳು ಘಟನೆ ನಡೆದ ತಕ್ಷಣ ಬ್ರೇಕಿಂಗ್ ನ್ಯೂಸ್ ಬಿತ್ತರಿಸುತ್ತದೆ. ಇದು ಅಪರಿಪೂರ್ಣವಾಗಿರುತ್ತದೆ ಎಂಬ ಧ್ವನಿಗಳನ್ನು ನಾವು ಗೌರವಿಸುತ್ತೇವೆ. ಹೀಗಾಗಿ ಬಂಟ್ವಾಳನ್ಯೂಸ್ ಬ್ರೇಕಿಂಗ್ ನ್ಯೂಸ್ ಗಾಗಿ ಆತುರಪಟ್ಟು ಸುದ್ದಿಯನ್ನು ಒದಗಿಸುವುದಿಲ್ಲ. ಸುದ್ದಿಯ ಖಚಿತತೆ ಲಭ್ಯವಾದ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಯಾವುದೇ ಆತುರ, ಸ್ಪರ್ಧೆಯೂ ನಮಗಿಲ್ಲ.

ಜಗತ್ತಿನೆಲ್ಲೆಡೆ ಇರುವ ಬಂಟ್ವಾಳ ತಾಲೂಕಿನ ಬಾಂಧವರು ಒಂದೇ ಕ್ಲಿಕ್ ಮೂಲಕ ನಮ್ಮಲ್ಲೇನಾಗುತ್ತಿದೆ ಎಂದು ಅರಿತುಕೊಳ್ಳಲು ಸಹಾಯ ಮಾಡುವುದು, ಎಲ್ಲ ಜಾತಿ, ಮತ, ಪಂಥ ಹಾಗೂ ಜನಸಾಮಾನ್ಯರಿಗೂ ವೇದಿಕೆ ನೀಡಿ ಸಮಾನವಾಗಿ ಕೊಂಡೊಯ್ಯುವ ಸುದ್ದಿಯನ್ನಷ್ಟೇ ನೀಡುವುದು ಹಾಗೂ ಯಾವುದೇ ಪೂರ್ವಾಗ್ರಹವಿಲ್ಲದ ಮಾಹಿತಿ ಕೊಡುವುದು ಜಾಲತಾಣದ ಉದ್ದೇಶ. ಇದರ ಬೆಳವಣಿಗೆಗೆ ತಮ್ಮ ಬೆಂಬಲ ನಿರೀಕ್ಷಿಸುತ್ತಿದ್ದೇವೆ. ಮಾಹಿತಿ, ಸಲಹೆಗಳಿಗೆ ಸದಾ ಸ್ವಾಗತ.

www.bantwalnews.comನಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳ ವಿಚಾರಗಳಿಗೂ ವೆಬ್ ತಾಣಕ್ಕೂ ಸಂಬಂಧವಿಲ್ಲ. ಇದು ಓದುಗರ ಗಮನಕ್ಕೆ.

ನಿಮ್ಮವನೇ..

ಹರೀಶ ಮಾಂಬಾಡಿ
 ಸಂಪಾದಕ
www.bantwalnews.com